News Karnataka Kannada
Sunday, May 05 2024
ಮಹಾರಾಷ್ಟ್ರ

ಹೊಟ್ಟೆಗಿಲ್ಲದೆ ಕಂಟೇನರ್ ನಲ್ಲಿ ೬೦ ದಿನ ಕಳೆದ ರಾಕೂನ್

ಅಮೆರಿಕಾದಿಂದ ಜವಾಹರಲಾಲ್ ನೆಹರು ಬಂದರಿಗೆ ತೇಲಿಬಂದ ಹಡಗಿನಲ್ಲಿ ಕಂಡುಬಂದ ರಾಕೂನ್ ಕಳೆದ ೬೦ ದಿನಗಳ ಕಾಲ ಖಾಲಿ ಹೊಟ್ಟೆಯಲ್ಲಿ ಬದುಕಿದ್ದ ಘಟನೆ ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
Photo Credit : News Kannada

ಮುಂಬೈ: ಅಮೆರಿಕಾದಿಂದ ಜವಾಹರಲಾಲ್ ನೆಹರು ಬಂದರಿಗೆ ತೇಲಿಬಂದ ಹಡಗಿನಲ್ಲಿ ಕಂಡುಬಂದ ರಾಕೂನ್ ಕಳೆದ ೬೦ ದಿನಗಳ ಕಾಲ ಖಾಲಿ ಹೊಟ್ಟೆಯಲ್ಲಿ ಬದುಕಿದ್ದ ಘಟನೆ ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಸರಕಿನ ಹಿಂದೆ ಸಿಲುಕಿದ್ದ ಈ ರಾಕೂನ್ ಪತ್ತೆಯಾದಾಗ ತೀರಾ ನಿತ್ರಾಣ ಸ್ಥಿತಿಯಲ್ಲಿದ್ದ ಬಗ್ಗೆ ಮಾಹಿತಿ ನೀಡಿದ ಬಂದರಿನ ಅಧಿಕಾರಿಗಳು ಕೂಡಲೇ RAWW ಅನ್ನು ಸಂಪರ್ಕಿಸಿದ್ದಾರೆ.
ತನಿಖೆಯ ನಂತರ ರಾಕೂನ್ ನವೆಂಬರ್ ೫ರಂದು ಅಮೆರಿಕದಿಂದ ಹೊರಟಿದ್ದ ಹಡಗಿನಲ್ಲಿ ಅಡಗಿತ್ತು ಎಂದು ತಿಳಿದುಬಂದಿದೆ.
ನರಿ ಅಥವ ನಾಯಿಗಳನ್ನು ಹೋಲುವ ಈ ಪ್ರಾಣಿಯು ಸತತ ೬೦ ದಿನಗಳ ಕಾಲ ಆಹಾರವಿಲ್ಲದೆ ಕಳೆದಿತ್ತು ಎಂದು RAWW ಸಂಸ್ಥಾಪಕ ಪವನ್ ಶರ್ಮಾ ಹೇಳಿದ್ದಾರೆ.
ರಾಕೂನ್ ಗೆ ಅಗತ್ಯ ಆಹಾರ ನೀಡಲಾಗಿದ್ದು, ಅದು ಚೇತರಿಸಿಕೊಂಡ ಬಳಿಕ ಮರಳಿ ಅಮೇರಿಕಕ್ಕೆ ಕಳುಹಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಅವರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು