News Karnataka Kannada
Monday, April 29 2024
ಮಹಾರಾಷ್ಟ್ರ

ಮಹಾರಾಷ್ಟ್ರದ 16 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ದೇವಸ್ಥಾನ ವಿಶ್ವಸ್ತರ ಅಧಿವೇಶನ ಆಯೋಜನೆ

ಶ್ರೀ ಕ್ಷೇತ್ರ ಓಝರನಲ್ಲಿ ಡಿ.2 ಮತ್ತು 3 ರಂದು ಆಯೋಜಿಸಲಾಗಿದ್ದ ದ್ವಿತೀಯ 'ಮಹಾರಾಷ್ಟ್ರ ಮಂದಿರ ನ್ಯಾಸ ಪರಿಷದ್' ಸಮ್ಮೇಳನ'ದ ಸಮಾರೋಪದ ಸಂದರ್ಭದಲ್ಲಿ 'ರಾಜ್ಯ ಮಟ್ಟದ ದೇವಸ್ಥಾನಗಳ ಮಹಾಸಂಘ'ದ ಘೋಷಣೆ ಮಾಡಲಾಯಿತು.
Photo Credit : News Kannada

ಪುಣೆ: ಶ್ರೀ ಕ್ಷೇತ್ರ ಓಝರನಲ್ಲಿ ಡಿ.2 ಮತ್ತು 3 ರಂದು ಆಯೋಜಿಸಲಾಗಿದ್ದ ದ್ವಿತೀಯ ‘ಮಹಾರಾಷ್ಟ್ರ ಮಂದಿರ ನ್ಯಾಸ ಪರಿಷದ್’ ಸಮ್ಮೇಳನ’ದ ಸಮಾರೋಪದ ಸಂದರ್ಭದಲ್ಲಿ ‘ರಾಜ್ಯ ಮಟ್ಟದ ದೇವಸ್ಥಾನಗಳ ಮಹಾಸಂಘ’ದ ಘೋಷಣೆ ಮಾಡಲಾಯಿತು.

ಇದರಲ್ಲಿ ಪ್ರಮುಖವಾಗಿ ರಾಜ್ಯದ 264 ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲು ಮತ್ತು 16 ಜಿಲ್ಲೆಗಳಲ್ಲಿ ‘ಜಿಲ್ಲಾ ಮಟ್ಟದ ದೇವಸ್ಥಾನ ಧರ್ಮದರ್ಶಿಗಳ ಅಧಿವೇಶನ’ ನಡೆಸಲು ನಿರ್ಣಯ ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸರಕಾರೀಕರಣಗೊಳಿಸಿದ ಎಲ್ಲ ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸಿ ಮಹಾರಾಷ್ಟ್ರ ಸರಕಾರವು ಭಕ್ತರ ವಶಕ್ಕೆ ಒಪ್ಪಿಸಬೇಕು, ದೇವಸ್ಥಾನದ ಸಂಪತ್ತನ್ನು ಅಭಿವೃದ್ಧಿ ಕಾರ್ಯಗಳಿಗೆ ಉಪಯೋಗಿಸಬಾರದು, ಮಹಾರಾಷ್ಟ್ರದ ಪೌರಾಣಿಕ ಮತ್ತು ಐತಿಹಾಸಿಕ ದೇವಸ್ಥಾನಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುವ ಮೂಲಕ ಅವುಗಳ ಜೀರ್ಣೋದ್ಧಾರ ಮಾಡಬೇಕು.

ಲೇಣ್ಯಾದ್ರಿ ಶ್ರೀ ಗಣೇಶ ದೇವಸ್ಥಾನಕ್ಕೆ ಬರುವ ಯಾತ್ರಾರ್ಥಿಗಳಿಗೆ ಕೇಂದ್ರ ಪುರಾತತ್ವ ಇಲಾಖೆಯಿಂದ ಸಂಗ್ರಹಿಸಲಾಗುವ ನಿಧಿ ಸಂಗ್ರಹವನ್ನು ನಿಲ್ಲಿಸಬೇಕು. ತೀರ್ಥಕ್ಷೇತ್ರಗಳು, ಕೋಟೆ ಮತ್ತು ದುರ್ಗಗಳ ಮೇಲಿನ ಅತಿಕ್ರಮಣಗಳನ್ನು ಸರಕಾರ ತಕ್ಷಣವೇ ತೆಗೆದುಹಾಕಬೇಕು, ತೀರ್ಥಕ್ಷೇತ್ರಗಳು ಮತ್ತು ಇತರೆ ದೇವಸ್ಥಾನಗಳ ಪರಿಸರದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ಸರಕಾರ ನಿಷೇಧಿಸಬೇಕು. ಅಯೋಧ್ಯೆಯ ಶ್ರೀರಾಮ ಮಂದಿರದ ದೀಪೋತ್ಸವದ ನಿಮಿತ್ತ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ದೀಪೋತ್ಸವವನ್ನು ಆಚರಿಸಿ ಶ್ರೀರಾಮಜಪದ ಆಯೋಜನೆ ಮಾಡಬೇಕು ಎನ್ನುವ ಮಹತ್ವಪೂರ್ಣ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಈ ಸಮ್ಮೇಳನಕ್ಕಾಗಿ ಶ್ರೀ ಅಷ್ಟವಿನಾಯಕ ದೇವಸ್ಥಾನದ ವಿಶ್ವಸ್ತರು, ಮಹಾರಾಷ್ಟ್ರದ ಜ್ಯೋತಿರ್ಲಿಂಗ ದೇವಸ್ಥಾನದ ವಿಶ್ವಸ್ತರು, ಸಂತ ಪೀಠಗಳ ಪ್ರತಿನಿಧಿ, ಜೊತೆಗೆ ದೇಹೂವಿನ ಸಂತ ತುಕಾರಾಂ ಮಹಾರಾಜರ ದೇವಸ್ಥಾನ, ಪೈಠಣದಲ್ಲಿನ ನಾಥ ದೇವಸ್ಥಾನ, ಗೊಂದವಲೆಯಲ್ಲಿರುವ ಶ್ರೀರಾಮ ದೇವಸ್ಥಾನ, ರತ್ನಾಗಿರಿಯಲ್ಲಿರುವ ಗಣಪತಿಪುಲೆ ದೇವಸ್ಥಾನ, ಶ್ರೀ ಏಕವೀರಾ ದೇವಿ ದೇವಸ್ಥಾನ, ಅಮ್ಮಳನೇರನಲ್ಲಿರುವ ಮಂಗಳಗ್ರಹ ದೇವಸ್ಥಾನ, ವಿಶ್ವ ಹಿಂದೂ ಪರಿಷತ್ತಿನ ಮಠ ದೇವಸ್ಥಾನಗಳ ವಿಭಾಗೀಯ ಸಹಾಯಕ ಕಾರ್ಯನಿರ್ವಾಹಕ ಶ್ರೀ. ಜಯಪ್ರಕಾಶ ಖೋತ ಮತ್ತು ಶ್ರೀ. ಮಹೇಶ ಕುಲಕರ್ಣಿ ಅವರೊಂದಿಗೆ ರಾಜ್ಯದ 650ಕ್ಕೂ ಹೆಚ್ಚು ದೇವಸ್ಥಾನದ ಧರ್ಮದರ್ಶಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಇನ್ನು ಮುಂದಿನ ಕಾಲಾವಧಿಯಲ್ಲಿ ದೇಶಕ್ಕಾಗಿ ಆದರ್ಶಪ್ರಾಯವಾಗಿರುವ ದೇವಸ್ಥಾನಗಳ ಸಂಘಟನೆಯನ್ನು ಮಹಾರಾಷ್ಟ್ರದಲ್ಲಿ ಸ್ಥಾಪಿಸಲು ಎಲ್ಲರೂ ನಿರ್ಣಯಿಸಿದರು.

ಈ ಸಂದರ್ಭದಲ್ಲಿ, ಮಹಾರಾಷ್ಟ್ರ ದೇವಸ್ಥಾನ ಮಹಾಸಂಘದ ರಾಜ್ಯ ಕಾರ್ಯಕಾರಿಣಿಯ ಸಮಿತಿಯ ರಚನೆಯನ್ನು ಘೋಷಿಸಲಾಯಿತು. ಇದರಲ್ಲಿ ಪ್ರಮುಖವಾಗಿ ಮಹಾಸಂಘದ ಮಾರ್ಗದರ್ಶಕ ಮಂಡಳಿಯನ್ನು ಘೋಷಿಸಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮನ್ವಯಕರನ್ನು ಘೋಷಿಸಲಾಗಿದೆ. ಇನ್ನು ಮುಂದಿನ ಕಾಲದಲ್ಲಿ ಗ್ರಾಮಮಟ್ಟದಲ್ಲಿ ದೇವಸ್ಥಾನ ಮಹಾಸಂಘದ ಕಾರ್ಯವನ್ನು ತಲುಪಿಸಲು ಎಲ್ಲರೂ ನಿರ್ಧರಿಸಿದರು.

ಎರಡು ದಿನ ನಡೆದ ಪರಿಷದ್ ನಲ್ಲಿ ದೇವಸ್ಥಾನದ ಸುವ್ಯವಸ್ಥಿತ ಕಾರ್ಯನಿರ್ವಹಣೆ, ದೇವಸ್ಥಾನ ಜಮೀನು, ನಿಯಮಗಳು ಮತ್ತು ಅತಿಕ್ರಮಣ, ದೇವಸ್ಥಾನಗಳ ಜೀರ್ಣೋದ್ಧಾರ ಮಾಡುವಾಗ ನೀಡಬೇಕಾದ ದಕ್ಷತೆ, ಅರ್ಚಕರ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು, ದೇವಸ್ಥಾನಗಳು ಸನಾತನ ಧರ್ಮದ ಪ್ರಸಾರ ಕೇಂದ್ರಗಳನ್ನಾಗಿ ಹೇಗೆ ಮಾಡಬೇಕು, ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ, ದೇವಸ್ಥಾನಗಳ ವಿಶ್ವಸ್ಥರು ಮತ್ತು ಅರ್ಚಕರ ಕಾರ್ಯಕ್ರಮ, ದತ್ತಿ ಆಯುಕ್ತರ ಕಛೇರಿ ಮತ್ತು ದೇವಸ್ಥಾನಗಳ ಸಮನ್ವಯ ಇದರೊಂದಿಗೆ ವಿವಿಧ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಯಿತು. ದೇವಸ್ಥಾನಗಳ ನಿರ್ವಹಣೆಯ ಸಂದರ್ಭದಲ್ಲಿ ಮಾಜಿ ದತ್ತಿ ಆಯುಕ್ತ ದಿಲೀಪ ದೇಶಮುಖ ಇವರು ಮಾತನಾಡಿ, ದೇವಸ್ಥಾನಗಳ ನಿರ್ವಹಣೆ ಮಾಡುವಾಗ ಭಕ್ತರನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಮಾಡಿದರೆ ಆದರ್ಶ ನಿರ್ವಹಣೆ ಮಾಡಲು ಸಾಧ್ಯವಾಗುವುದು ಎಂದು ಹೇಳಿದರು. ಹಾಗೆಯೇ ಮುಂಬಯಿಯ ಬಾಣಗಂಗಾ ತೀರ್ಥಕ್ಷೇತ್ರ ದೇವಸ್ಥಾನದ ಋತ್ವಿಕ ಔರಂಗಾಬಾದಕರ ಇವರು ಮಹಾರಾಷ್ಟ್ರ ದೇವಸ್ಥಾನ ಸಮ್ಮೇಳನದ ಮಾಧ್ಯಮದಿಂದ ವಾಳಕೇಶ್ವರ ಮಹಾದೇವ ದೇವಸ್ಥಾನದ ಪುನರುಜ್ಜೀವನವನ್ನು ನಾವು ಮಾಡೋಣ ಎಂದು ಈ ಸಂದರ್ಭದಲ್ಲಿ ಹೇಳಿದರು. ‘ಪ್ರತಿಯೊಂದು ದೇವಸ್ಥಾನವೂ ಧರ್ಮಪ್ರಸಾರದ ಕೇಂದ್ರವಾಗಬೇಕು’ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಸದ್ಗುರು ಸ್ವಾತಿ ಖಾಡ್ಯೆ ಅವರು ಹೇಳಿದರು.

ಪರಿಷತ್ತಿನ ಮಾಧ್ಯಮದಿಂದ ಧರ್ಮ, ಸಂಸ್ಕೃತಿ ಮತ್ತು ಸಂಪ್ರದಾಯ ಪರಂಪರೆಯನ್ನು ರಕ್ಷಿಸಲು ಪ್ರಯತ್ನಿಸೋಣ – ಸದಸ್ಯರು, ಭಾರತೀಯ ಜೀವಜಂತು ಅಭಿವೃದ್ಧಿ ಮಂಡಳಿ, ಭಾರತ ಸರ್ಕಾರ.

ದೇವಸ್ಥಾನಗಳು ಸಂಪೂರ್ಣ ಹಿಂದೂ ಸಮಾಜದ ಉನ್ನತಿಯ ಮಾಧ್ಯಮವಾಗಿದೆ. ಪ್ರತಿಯೊಂದು ದೇವಸ್ಥಾನದಲ್ಲಿ ಸನಾತನ ಧರ್ಮ ಪರಂಪರೆಯ ಶಿಕ್ಷಣ ನೀಡಬೇಕು. ಒಂದು ದೇವಸ್ಥಾನವು ಇನ್ನೊಂದು ದೇವಸ್ಥಾನಕ್ಕೆ ಭೇಟಿ ನೀಡಿ ಪರಸ್ಪರ ಸಹಾಯ ಮಾಡಬೇಕು. ದೇವಸ್ಥಾನದ ಹಣವೆಂದರೆ ಧರ್ಮದ್ರವ್ಯವಾಗಿದೆ. ನಾವೆಲ್ಲರೂ ಒಟ್ಟಾಗಿ ಸೇರಿ ನಮ್ಮ ಧರ್ಮ, ಸಂಸ್ಕೃತಿ, ಪರಂಪರೆಯನ್ನು ರಕ್ಷಿಸುವ ಪ್ರಯತ್ನವನ್ನು ಈ ಸಮ್ಮೇಳನದ ಮಾಧ್ಯಮದಿಂದ ಮಾಡಬೇಕಾಗಿದೆ ಎಂದು ಮಹಾರಾಷ್ಟ್ರ ಮಂದಿರ ಮಹಾಸಂಘದ ಶ್ರೀ. ಸುನಿಲ್ ಘನವಟ, ಸಮನ್ವಯಕರು ತಿಳಿಸಿದ್ದಾರೆ.

ಕಾನಿಫನಾಥ ದೇವಸ್ಥಾನದ ಇನಾಮಿ ಆದಾಯದ ಮೇಲೆ ಕಣ್ಣಿಟ್ಟು, ಮುಸ್ಲಿಂ ಸಮುದಾಯವು ನಿಯಮಬಾಹಿರ ಪದ್ಧತಿಯಿಂದ ಕಾನಿಫನಾಥ ದೇವಸ್ಥಾನವನ್ನು ತನ್ನ ಸ್ವಾಧೀನಪಡಿಸಿಕೊಂಡು, ಎಲ್ಲಾ ಆಸ್ತಿಯನ್ನು ವಕ್ಫ್‌ಗೆ ವಿಲೀನಗೊಳಿಸಿಕೊಂಡಿತು, ಹಾಗೆಯೇ ಕಾನಿಫನಾಥ ದೇವಸ್ಥಾನದ ಹೆಸರನ್ನು ಬದಲಾಯಿಸಿ, ಹಜರತ ರಮಜಾನ ಶಾ ದರ್ಗಾ ಎಂದು ಮಾಡಲಾಯಿತು. ಈ ವಿಷಯ ಅಲ್ಲಿಯ ಗ್ರಾಮಸ್ಥರ ಗಮನಕ್ಕೆ ಬರುತ್ತಲೇ ಎಲ್ಲರೂ ಸಂಘಟಿತರಾಗಿ ದೇವಸ್ಥಾನ ಮತ್ತು ಇನಾಮಿ ಆದಾಯದ ಬಗ್ಗೆ ಯಾವುದೇ ಪತ್ರ ವ್ಯವಹಾರ ಮಾಡಬಾರದು ಎಂದು ಗ್ರಾಮಸಭೆಯಲ್ಲಿ ಠರಾವು ಮಾಡಿದರು. ಕಾನಿಫನಾಥ ದೇವಸ್ಥಾನವನ್ನು ವಕ್ಫ ವಶಪಡಿಸಿಕೊಳ್ಳದಂತೆ ಗ್ರಾಮಸ್ಥರು ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ ಎಂದು ನ್ಯಾಯವಾದಿ ಶ್ರ. ಪ್ರಸಾದ ಕೊಳಸೆ ಪಾಟೀಲ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು