News Karnataka Kannada
Monday, May 13 2024
ಮಹಾರಾಷ್ಟ್ರ

8 ನೇ ತರಗತಿ ಓದಿದ ಯುವಕ ಹೆಲಿಕಾಪ್ಟರ್‌ ತಯಾರಿಸಿದ ; ಆದರೆ ವಿಧಿಯ ಆಟಕ್ಕೆ ಬಲಿಯಾದ

Helicopter
Photo Credit :

ಯಾವತ್ಮಲ್​ : 8 ನೇ ತರಗತಿ ಓದಿದ್ದ ಯುವಕನೊಬ್ಬ ಹೆಲಿಕಾಪ್ಟರ್‌ ತಯಾರಿಸಿದ್ದು ಇನ್ನೇನು ಪೂರ್ಣ ಪ್ರಮಾಣದಲ್ಲಿ ಹಾರಾಟ ನಡೆಸಬೇಕೆನ್ನುವಷ್ಟರಲ್ಲಿ ವಿಧಿಯ ಆಟಕ್ಕೆ ಬಲಿಯಾಗಿ ಸಾವನ್ನಪ್ಪಿದ್ದಾನೆ.
ಮಹಾರಾಷ್ಟ್ರದ ಯಾವತ್ಮಲ್​ ಜಿಲ್ಲೆಯ ಮಹಾಗಾವ್ ತಹಸೀಲ್​ನಲ್ಲಿರುವ ಫುಲಸಾವಂಗಿ ಗ್ರಾಮದ ನಿವಾಸಿಯಾಗಿದ್ದ ಶೇಖ್​ ಇಸ್ಮಾಯಿಲ್​ ಶೇಖ್ ಇಬ್ರಾಹಿಂ 8ನೇ ತರಗತಿ ವ್ಯಾಸಂಗ ನಿಲ್ಲಿಸಿ ತನ್ನ ಅಣ್ಣನ ಗ್ಯಾಸ್​ ವೆಲ್ಡಿಂಗ್​ ವರ್ಕ್​ಶಾಪ್​ ಸೇರಿದ್ದ. ಅಲ್ಲಿ ಅಲ್ಮಿರಾ, ಕೂಲರ್​ಗಳು ಮತ್ತು ಇತರ ಗೃಹಬಳಕೆ ವಸ್ತುಗಳ ನಿರ್ಮಾಣ ಕಲಿತಿದ್ದ ಆತ ಎರಡು ವರ್ಷದಿಂದ ಹೆಲಿಕಾಪ್ಟರ್​ ನಿರ್ಮಿಸುವ ಪ್ರಯೋಗದಲ್ಲಿ ತೊಡಗಿದ್ದ. ಇಸ್ಮಾಯಿಲ್​, ಯೂಟ್ಯೂಬ್​ ವಿಡಿಯೋಗಳನ್ನು ನೋಡಿ ಹೆಲಿಕಾಪ್ಟರ್‌ ಡಿಸೈನ್​ ಮತ್ತಿತರ ಅಂಶಗಳನ್ನು ಕಲಿತ. ಸ್ಟೀಲ್​ ಪೈಪ್​ಗಳನ್ನು ಬಳಸಿ ಸಿಂಗಲ್​ ಸೀಟರ್​ ಪ್ರೋಟೋಟೈಪನ್ನು ತಯಾರಿಸಿ, ಅದಕ್ಕೆ ಮಾರುತಿ 800 ಕಾರಿನ ಇಂಜಿನ್​ ಅಳವಡಿಸಿ 5 ಅಡಿ ಎತ್ತರದಷ್ಟು ಹಾರಾಟ ಆಗುವಂತೆ ಪ್ರಯೋಗ ಕೂಡ ಮಾಡಿದ್ದ ಎನ್ನಲಾಗಿದೆ.
‘ಮುನ್ನ ಹೆಲಿಕಾಪ್ಟರ್’​ ಎಂದು ತನ್ನ ಅಡ್ಡಹೆಸರನ್ನೇ ಅವನು ನಿರ್ಮಿಸಿದ ಹೆಲಿಕಾಪ್ಟರ್​ಗೆ ಇಟ್ಟಿದ್ದ ಇಸ್ಮಾಯಿಲ್​, ಮಂಗಳವಾರ ರಾತ್ರಿ ವರ್ಕ್​ಶಾಪ್​ನ ಬಳಿ ಅದರ ಅಂತಿಮ ಪರೀಕ್ಷೆ ಮಾಡುತ್ತಿದ್ದ. ಇಂಜಿನ್​ ಆರಂಭವಾದಾಗ ಸ್ನೇಹಿತರು ನೋಡುತ್ತಿರುವಂತೆಯೇ, ಹೆಲಿಕಾಪ್ಟರ್​ನ ಒಂದು ರೋಟಾರ್ ಬ್ಲೇಡ್ ಮುರಿದು ಅವನ ಗಂಟಲನ್ನು ಸೀಳಿತು. ನೆಲಕ್ಕುರುಳಿ, ವಿಪರೀತ ರಕ್ತ ಹರಿಯುತ್ತಿದ್ದ ಇಸ್ಮಾಯಿಲ್​ಅನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಯಾವುದೇ ಚಿಕಿತ್ಸೆ ನೀಡುವ ಮುಂಚೆ ಆತ ಸಾವಪ್ಪಿದ ಎನ್ನಲಾಗಿದೆ. ಈತನ ಸಾವಿಗೆ ಇಡೀ ಗ್ರಾಮವೇ ಮಮ್ಮಲ ಮರುಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು