News Karnataka Kannada
Monday, April 29 2024
ಮಹಾರಾಷ್ಟ್ರ

ಕುಂದ್ರಾ–ಶಿಲ್ಪಾ ದಂಪತಿಗೆ ಮತ್ತೊಂದು ಆಘಾತ– ₹ 3 ಲಕ್ಷ ದಂಡ ವಿಧಿಸಿದ ಸೆಬಿ

Shilpa 27072021
Photo Credit :

ಮುಂಬೈ: ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾಶೆಟ್ಟಿಗೆ ಮತ್ತೊಂದು ಮುಖಭಂಗ ಅನುಭವಿಸಿದ್ದಾರೆ.

ಆಂತರಿಕ ವ್ಯಾಪಾರ ನಿಯಮಗಳ ಉಲ್ಲಂಘನೆ ಮತ್ತು ಮಾಹಿತಿ ಬಹಿರಂಗದಲ್ಲಿ ಲೋಪಕ್ಕಾಗಿ ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್ ನ ಪ್ರವರ್ತಕರಾದ ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾಶೆಟ್ಟಿಗೆ ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ಬುಧವಾರ ದಂಡ ವಿಧಿಸಿದೆ. ಒಟ್ಟು 3 ಮೂರು ಲಕ್ಷ ರೂ. ದಂಡವನ್ನು ಪಾವತಿಸುವಂತೆ ಸೆಬಿ ಆದೇಶಿಸಿದೆ.

ವಿಯಾನ್ ಇಂಡಸ್ಟ್ರೀಸ್ ಲಿಮಿಟೆಡ್ ನಿಂದ ಸೆಪ್ಟೆಂಬರ್ 2013 – ಡಿಸೆಂಬರ್ 2015ರ ನಡುವೆ ನಡೆಸಲಾದ ತನಿಖೆಯಲ್ಲಿ ಆಂತರಿಕ ವ್ಯಾಪಾರ ನಿಯಮಗಳ ಉಲ್ಲಂಘನೆ ದೃಢಪಟ್ಟಿದ್ದರಿಂದ ಸೆಬಿ ದಂಡ ವಿಧಿಸಿದೆ.

ಈ ಸಂಬಂಧಿತ ನೋಟಿಸ್ ಗಳಿಗೆ ಮೂರು ವರ್ಷಗಳಿಗಿಂತ ಹೆಚ್ಚು ವಿಳಂಬ ಮಾಡಿರುವುದನ್ನು ಸೆಬಿ ಗಮನಿಸಿತ್ತು. ಆದ್ದರಿಂದ ಈ ಅಂಶಗಳು ಮತ್ತು ಘಟನಾವಳಿಗಳನ್ನು ಪರಿಗಣಿಸಿ, ನೋಟಿಸ್ ಗಳ ಆಧಾರದ ಮೇಲೆ ದಂಡ ವಿಧಿಸಲಾಗಿದೆ ಎಂದು ತೀರ್ಪು ನೀಡುವ ಅಧಿಕಾರಿ ಸುರೇಶ್ ಬಿ ಮೆನನ್ ಆದೇಶದಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು