ಮುಂಬೈ: ಶಿವಸೇನಾ ಶಾಸಕ ರಮೇಶ್ ಲಟ್ಕೆ (52) ಅವರು ದುಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಲಟ್ಕೆ ಕುಟುಂಬಸ್ಥರೊಂದಿಗೆ ದುಬೈಗೆ ಪ್ರವಾಸ ಹೋಗಿದ್ದರು. ಬುಧವಾರ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಅವರ ಪಾರ್ಥಿವ ಶರೀರವನ್ನು ಗುರುವಾರ ಭಾರತಕ್ಕೆ ತರುವ ನಿರೀಕ್ಷೆ ಇದೆ.
ಲಟ್ಕೆ ಅವರು ಮುಂಬೈ ನಗರದ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ಬೃಹನ್ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಕಾರ್ಪೋರೇಟರ್ ಆಗಿದ್ದರು.