ನೈಜೀರಿಯಾದಿಂದ ಪುಣೆಗೆ ಬಂದಿದ್ದ ಆರು ಮಂದಿಗೆ ಒಮಿಕ್ರಾನ್ ವೈರಸ್ ದೃಢಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಮಾಹಿತಿ ನೀಡಿದೆ.
44 ವರ್ಷದ ಮಹಿಳೆ ಒಬ್ಬರು ನವೆಂಬರ್ 24 ರಂದು ತನ್ನ ಇಬ್ಬರು ಸಹೋದರರು, ಓರ್ವ ಸಹೋದರನ ಇಬ್ಬರು ಮಕ್ಕಳ ಜೊತೆ ಪುಣೆಯ ಪಿಂಪ್ರಿ ಚಿಂಚ್ವಾಡ್ಗೆ ಬಂದಿದ್ದರು. ಈ ಐವರಿಗೆ ಹಾಗೂ ಪುಣೆಗೆ ಬಂದಿದ್ದ 47 ವರ್ಷದ ವ್ಯಕ್ತಿ ಸೇರಿ ಒಟ್ಟು ಆರು ಮಂದಿಗೆ ಹೊಸ ರೂಪಾಂತರ ದೃಢಪಟ್ಟಿದೆ.
ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದ್ದ ಒಮಿಕ್ರಾನ್ ಬಳಿಕ 38 ರಾಷ್ಟ್ರಗಳಿಗೆ ಹರಡಿದೆ. ಡಿಸೆಂಬರ್ 2 ರಂದು ಭಾರತದ ಮೊದಲೆರಡು ಕೇಸ್ಗಳು ಕರ್ನಾಟಕದಲ್ಲಿ ವರದಿಯಾಗಿದ್ದವು. ಇದೀಗ ಗುಜರಾತ್ನಲ್ಲಿ 1, ಮಹಾರಾಷ್ಟ್ರ 8 ಹಾಗೂ ದೆಹಲಿಯಲ್ಲಿ 1 ಕೇಸ್ ಪತ್ತೆಯಾಗಿದ್ದು, ದೇಶದಲ್ಲಿ ಈವರೆಗೆ ಒಟ್ಟು 12 ಮಂದಿಗೆ ಅಂಟಿದಂತಾಗಿದೆ.