News Karnataka Kannada
Tuesday, April 30 2024
ಮಹಾರಾಷ್ಟ್ರ

ಮುಂಬೈ: ಬಹುಮಹಡಿ ಕಟ್ಟಡ ಕುಸಿತ 9 ಮಂದಿಗೆ ಗಾಯ

Mumbai
Photo Credit :

ಮುಂಬೈ: ಮುಂಬೈನ ಉಪನಗರ ಬಾಂದ್ರಾದ ಪಶ್ಚಿಮ ಉಪನಗರದ ಬೆಹ್ರಾಮ್ ನಗರದಲ್ಲಿ ಬುಧವಾರ ಬಹುಮಹಡಿ ಕಟ್ಟಡ ಕುಸಿದು ಮೂವರು ಬಾಲಕಿಯರು ಸೇರಿದಂತೆ ಒಂಬತ್ತು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಉಪನಗರದ ಬೆಹ್ರಾಮ್ ನಗರದಲ್ಲಿ ಸಂಜೆ 3.50ರ ಹೊತ್ತಿಗೆ ಸುಮಾರು ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿತ್ತು.ಘಟನೆಯಲ್ಲಿ ಗಾಯಗೊಂಡ ಮೂವರು ಬಾಲಕಿಯರು ಸೇರಿದಂತೆ ಒಂಬತ್ತು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ 64 ವರ್ಷದ ವೃದ್ಧ ಕೂಡ ಸೇರಿದ್ದಾನೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂದು ತಿಳಿಸಿದ್ದಾರೆ.ಆರು ಆಂಬ್ಯುಲೆನ್ಸ್, ಐದು ಅಗ್ನಿಶಾಮಕ ವಾಹನ ಹಾಗೂ ಮತ್ತೊಂದು ರಕ್ಷಣಾ ವಾಹನವು ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದ್ದವು.ಗಾಯಗೊಂಡವರ ಪೈಕಿ ಓರ್ವನ ಸ್ಥಿತಿ ಚಿಂತಾನಜನಕವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು