ಮುಂಬೈ: ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯನನ್ನು ದಿವಾಳಿ ಲಂಡನ್ ಹೈಕೋರ್ಟ್ ಎಂದು ಘೋಷಿಸಿದ ದಿವಾಳಿ ಎಂದು ಘೋಷಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತವಾಗಿದೆ. ವಿಜಯ್ ಮಲ್ಯ ಒಡೆತನದ ಕಿಂಗ್ಫಿಷರ್ ಹೌಸ್ 52 ಕೋಟಿ ರೂ.ಗೆ ಮಾರಾಟವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೈದರಾಬಾದ್ ಮೂಲದ ಖಾಸಗಿ ಡೆವಲಪರ್ ಸತುರ್ನ್ ರಿಯಲ್ಟರ್ಸ್ 52 ಕೋಟಿ ರೂ.ಗೆ ಕೊಂಡಿದ್ದಾರೆ. ಈ ಕಟ್ಟಡ ವಿಜಯ್ ಮಲ್ಯ ಸ್ಥಾಪಿಸಿದ ಏರ್ಲೈನ್ನ ಪ್ರಧಾನ ಕಚೇರಿಯಾಗಿದೆ. ಹಲವು ವರ್ಷಗಳಿಂದ ಹರಾಜು ಪ್ರಕ್ರಿಯೆ ನಡೆದಿದ್ದರೂ ಸಾಲದಾತರು ಖರೀದಿದಾರರನ್ನು ಹುಡುಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಮೂಲ ಬೆಲೆಗೆ ಕಟ್ಟಡ ಮಾರಾಟವಾಗಿದೆ. ರಿಯಲ್ ಎಸ್ಟೇಟ್ ಉದ್ಯಮದ ತಜ್ಞರ ಪ್ರಕಾರ, ಬ್ಯಾಂಕ್ಗಳು ಮೂಲತಃ ಮೀಸಲು ಬೆಲೆಯನ್ನು ಅವಾಸ್ತವಿಕವಾಗಿ ನಿಗದಿಪಡಿಸಿದ್ದರು. ಹೀಗಾಗಿ ಆಸ್ತಿಯು ಹಲವು ಮಿತಿಗಳನ್ನು ಹೊಂದಿತ್ತು. ಮುಂಬೈ ವಿಮಾನ ನಿಲ್ದಾಣದ ಹೊರವಲಯದಲ್ಲಿರುವುದರಿಂದ ಆಸ್ತಿಯನ್ನು ಹೆಚ್ಚು ಅಭಿವೃದ್ಧಿಪಡಿಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.
ಕಟ್ಟಡವು ನೆಲಮಾಳಿಗೆ ಹಾಗೂ ಮೂರು ಅಂತಸ್ತಿನದ್ದಾಗಿದೆ. ಒಟ್ಟು 1,586 ಚ.ಮೀ. ಅಳತೆ ಹೊಂದಿದ್ದು, ಇದರಲ್ಲಿ 2,402 ಚ.ಮೀ. ಪ್ಲಾಟ್ ಮನೆ ಇದೆ. ಹಲವು ಬಾರಿ ಹರಾಜು ಪ್ರಕ್ರಿಯೆ ರದ್ದಾದರೂ ಇದೀಗ ಅಂತಿಮವಾಗಿ ಆಸ್ತಿ ಮಾರಾಟವಾಗಿದೆ.
ಕಿಂಗ್ಫಿಷರ್ ಕಟ್ಟಡ 52 ಕೋಟಿಗೆ ಮಾರಾಟ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.