ಮಹಾರಾಷ್ಟ್ರ: ನಾಗಪುರದ ಸದರ್ ಪ್ರದೇಶದಲ್ಲಿ ಚಲಿಸುತ್ತಿದ್ದ ಕಾರುಗಳ ಮೇಲೆ ಜೋರಾಗಿ ಸಂಗೀತ ಹಾಕಿಕೊಂಡು ನೃತ್ಯ ಮಾಡಿದ್ದ ಏಳು ಜನರನ್ನು ಪೊಲೀಸರು ಬಂಧಿಸಿ ಐದು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಪಿನ್ ವೇಣುಗೋಪಾಲ್ ನಾಯರ್ (23), ಮುಶೀರ್ ಅಬಿದ್ ಶೇಖ್ (30), ಮೈಲ್ವಿನ್ ಮನ್ಶಿರಾಮ್ ವರ್ತಿ (22), ಅಸ್ಲಾನ್ ಬೇಗ್ (21), ಶಾನವಾಜ್ ಮೊಹಮ್ಮದ್ ಖುರೇಷಿ (21), ಹಸನ್ ಬಶೀರ್ ಶೇಖ್ (22) ಮತ್ತು ಇಮ್ರಾನ್ ಅಶ್ಗರ್ ಅನ್ಸಾರಿ (26) ಎಂಬುವರನ್ನು ಬಂಧಿಸಲಾಗಿದೆ.
ನಾಗಪುರದ ಸದರ್ ಪ್ರದೇಶದಲ್ಲಿ ಕಾರು ಚಾಲನೆಯಲ್ಲಿದ್ದರೂ ಜೋರಾಗಿ ಹಾಡು ಹಾಕಿಕೊಂಡು ಕಾರಿನ ಮೇಲೆ ಏರಿ ನೃತ್ಯ ಮಾಡುತ್ತಾ ಸಾಗಿದ್ದರು.
ಏಪ್ರಿಲ್ 1ರಂದು ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲಾದ ನಂತರ ವಿಷಯ ತಿಳಿದ ಪೊಲೀಸರು ಈ ಆರು ಮಂದಿಯನ್ನು ಪತ್ತೆಹಚ್ಚಿ ಇದೀಗ ಬಂಸಿದ್ದಾರೆ.