ಮಧ್ಯಪ್ರದೇಶ: ರೈಸನ್ ಜಿಲ್ಲೆಯಲ್ಲಿ ಅನಿಯಂತ್ರಿತ ಡಂಪರ್ ಟ್ರಕ್ ಮದುವೆ ಮೆರವಣಿಗೆಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ.
ನಿನ್ನೆ (ಮಾ. 11) ರಾತ್ರಿ ಹೋಶಂಗಾಬಾದ್ ಜಿಲ್ಲೆಯ ಅಂಚಲಖೇಡಾದಿಂದ ಮೆರವಣಿಗೆ ಆಗಮಿಸಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 45ರ ಘಾಟ್ ಖಮಾರಿಯಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಗಾಯಗೊಂಡವರಿಗೆ ಆರಂಭದಲ್ಲಿ ಸುಲ್ತಾನ್ಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು, ನಂತರ ಅವರೆಲ್ಲರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಭೋಪಾಲ್ಗೆ ಕಳುಹಿಸಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.