News Karnataka Kannada
Tuesday, May 07 2024
ಮಧ್ಯ ಪ್ರದೇಶ

ಗುನಾದಲ್ಲಿ ತರಬೇತಿ ವಿಮಾನ ಪತನ: ಟ್ರೈನಿ ಪೈಲಟ್‌ ಪ್ರಾಣಾಪಾಯದಿಂದ ಪಾರು

ಮಧ್ಯಪ್ರದೇಶದ ಗುನಾದಲ್ಲಿ ತರಬೇತಿ ವಿಮಾನವೊಂದು ಇಂದು  ಪತನವಾಗಿದ್ದು,  ಘಟನೆಯಲ್ಲಿ ಮಹಿಳಾ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
Photo Credit : News Kannada

ಭೋಪಾಲ್: ಮಧ್ಯಪ್ರದೇಶದ ಗುನಾದಲ್ಲಿ ತರಬೇತಿ ವಿಮಾನವೊಂದು ಇಂದು  ಪತನವಾಗಿದ್ದು,  ಘಟನೆಯಲ್ಲಿ ಮಹಿಳಾ ಪೈಲಟ್‌ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೀಮಚ್‌ನಿಂದ ವಿಮಾನ ಟೇಕಾಫ್ ಆಗಿದ್ದು, ಹಾರಾಟದ ವೇಳೆ ಏಕಾಏಕಿ ಇಂಜಿನ್​ನಲ್ಲಿ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಪೈಲೆಟ್ ತುರ್ತು ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ.

ಆದರೆ ನಿಯಂತ್ರಣಕ್ಕೆ ಬಾರದಿದ್ದರಿಂದ ವಿಮಾನ ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ. ತುರ್ತು ಲ್ಯಾಂಡಿಂಗ್ ವೇಳೆ ವಿಮಾನ ಅಪಘಾತಕ್ಕೀಡಾದ ಬಗ್ಗೆ ಗುನಾ ಜಿಲ್ಲೆಯ ಸಬ್ ಇನ್ಸ್‌ಪೆಕ್ಟರ್ ಚಂಚಲ್ ತಿವಾರಿ ಅವರು ಖಚಿತಪಡಿಸಿದ್ದಾರೆ.

ಇನ್ನು ಗಾಯಗೊಂಡ ಪೈಲಟ್‌ನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು