ಭೋಪಾಲ್: ಮಧ್ಯಪ್ರದೇಶದ ಇಂದೋರ್ ಇತ್ತೀಚೆಗೆ ಅಪರೂಪದ ವಿವಾಹವೊಂದಕ್ಕೆ ಸಾಕ್ಷಿಯಾಯಿತು. ಇಂದೋರ್ನ ಅಲ್ಕಾ ಎಂಬ ಮಹಿಳೆ ಪುರಷನಾಗಿ ಲಿಂಗ ಪರಿವರ್ತನೆ ಮಾಡಿಕೊಂಡು ತನ್ನ ದೀರ್ಘಕಾಲದ ಗೆಳತಿ ಆಸ್ತಾಳನ್ನು ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಈ ರೀತಿಯ ವಿವಾಹವು ಇಂದೋರ್ನಲ್ಲಿ ಮೊದಲನೆಯದು ಎನ್ನಲಾಗಿದೆ.
ವಿಶೇಷ ವಿವಾಹ ಕಾಯ್ದೆಯಡಿ ಡಿಸೆಂಬರ್ 7ರಂದು ಮದುವೆ ನೆರವೇರಿದೆ.
ಅಲ್ಕಾ ಎನ್ನುವ ಮಹಿಳೆ ತನ್ನ 47ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಲಿಂಗ ಪರಿವರ್ತನೆ ಮಾಡಿಸಿಕೊಂಡು ಅಸ್ತಿತ್ವ ಎಂಬ ಹೆಸರಿನಲ್ಲಿ ಪುರುಷನಾಗಿ ಬದಲಾಗಿದ್ದಾರೆ. ಬಳಿಕ ಅವರು ಕುಟುಂಬ ನ್ಯಾಯಾಲಯದಲ್ಲಿ ತಮ್ಮ ಗೆಳತಿ ಆಸ್ತಾ ಅವರನ್ನು ವಿವಾಹವಾದರು. ಈ ಕಾರ್ಯಕ್ರಮದಲ್ಲಿ ಎರಡೂ ಕಡೆಯ ಕುಟುಂಬ ಸದಸ್ಯರು ಭಾಗವಹಿಸಿದ್ದರು.
ಇನ್ನು ಮದುವೆಗೂ ಮುನ್ನ ದಂಪತಿ ಇಂದೋರ್ ಜಿಲ್ಲಾಧಿಕಾರಿ ರೋಶನ್ ರಾಯ್ ಅವರಿಗೆ ತಮ್ಮ ಪರಿಸ್ಥಿತಿಯನ್ನು ವಿವರಿಸಿ ಮದುವೆಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಅರ್ಜಿಯನ್ನು ಸಮರ್ಪಕವಾಗಿ ಪರಿಶೀಲಿಸಿ ಎರಡೂ ಕಡೆಯ ಕಟುಂಬಸ್ಥರಿಗೆ ತಿಳಿಸಿ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಡಿಸೆಂಬರ್ 7ರಂದು ಅಸ್ತಿತ್ವ ಮತ್ತು ಆಸ್ತಾ ಎರಡೂ ಕಡೆಯ ಇಬ್ಬರು ಸಾಕ್ಷಿಗಳು ಮತ್ತು ಜಂಟಿ ಸಾಕ್ಷಿಯ ಸಮ್ಮುಖದಲ್ಲಿ ತಮ್ಮ ವಿವಾಹ ಪ್ರಮಾಣಪತ್ರವನ್ನು ಪಡೆದುಕೊಂಡರು. ಮದುವೆಯ ನಂತರ ಅಸ್ತಿತ್ವ ಮತ್ತು ಆಸ್ತಾ ಇಬ್ಬರೂ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.