ಮಧ್ಯಪ್ರದೇಶ: ನ್ಯುಮೋನಿಯಾದಿಂದ ಬಳಲುತ್ತಿದ್ದ ಒಂದೂವರೆ ತಿಂಗಳು ಗಂಡು ಮಗುವಿಗೆ ವ್ಯಕ್ತಿಯೊಬ್ಬರು ಬಿಸಿ ಕಬ್ಬಿಣದ ರಾಡ್ನಿಂದ 40 ಕಡೆ ಬರೆ ಹಾಕಿರುವ ಘಟನೆ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ನಡೆದಿದೆ. ಮಗುವಿನ ಸ್ಥಿತಿ ಹದಗೆಟ್ಟಿದ್ದು, ಆಸ್ಪತ್ರೆಗೆ ಸಾಗಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಮಗುವಿನ ಕುತ್ತಿಗೆ, ಹೊಟ್ಟೆ ಮತ್ತು ದೇಹದ ಇತರ ಭಾಗಗಳಲ್ಲಿ 40 ಕ್ಕೂ ಹೆಚ್ಚೂ ಬರೆ ಹಾಕಿದ ಗಾಯದ ಗುರುತುಗಳು ಕಂಡುಬಂದಿವೆ. ಈ ಕುರಿತು ಡಾಯಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಗುವಿನ ತಂದೆ ಬೂಟಿ ಬಾಯಿ ಬೈಗಾ ಮಗುವಿನ ತಾಯಿ ಬೆಟ್ಲವಾಟಿ ಬೈಗಾ ಮತ್ತು ಅಜ್ಜ ರಜನಿ ಬೈಗಾ ಎಂದು ಗುರುತಿಸಲಾಗಿದೆ.
ಮಗುವಿನ ಕುಟುಂಬ, ಹಾರ್ಡಿ ಗ್ರಾಮದ ನಿವಾಸಿಗಳು, ನವೆಂಬರ್ 4 ರಂದು ನ್ಯುಮೋನಿಯಾ ಚಿಕಿತ್ಸೆಗಾಗಿ ಡಾಯಿ ಬಳಿ ಹೋಗಿದ್ದಾಗ ಮಗುವಿಗೆ 40 ಬಾರಿ ಬರೆ ಎಳೆಯಲಾಗಿದೆ ಎಂದು ಆರೋಪಿಸಿದ್ದಾರೆ. ಮಗುವಿನ ಸ್ಥಿತಿ ಹದಗೆಟ್ಟಾಗ, ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಗಿದೆ.