ಭೋಪಾಲ್: ಮಧ್ಯಪ್ರದೇಶದ ಉಮರಿಯಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 43 ರಲ್ಲಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಜ್ಗಾವಾ ಗ್ರಾಮದ ಬಳಿ ಇಂದು ಮುಂಜಾನೆ 3 ಗಂಟೆಗೆ ಸುಮಾರಿಗೆ ಅಪಘಾತ ಸಂಬಭವಿಸಿದ್ದು, ಕಾರಿನಲ್ಲಿದ್ದವರು ಉಮಾರಿಯಾದ ಶಹದೋಲ್ ಗೆ ತೆರಳುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತಕ್ಕೆ ಅತಿ ವೇಗಕ್ಕೆ ಕಾರಣ ಎಂದು ಉಮಾರಿಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ನಾಯ್ಡು ಹೇಳಿದ್ದಾರೆ. ಘಟನೆ ಪೊಲೀಸರು ನಡೆಸುತ್ತಿದ್ದಾರೆ.