ಮಧ್ಯಪ್ರದೇಶ: ಚಂಡಿಯಾದಿಂದ ಮನೇಂದ್ರಗಢಕ್ಕೆ ಹೋಗುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದಿರುವ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದಂತೆ ಮೂವರು ಗಾಯಗೊಂಡಿದ್ದಾರೆ.
ಆಶ್ಚರ್ಯ ಅಂದರೆ ಈ ಅವಘಡಕ್ಕೆ ಕಾರಣವಾಗಿದ್ದು ಮಾತ್ರ ಇಲಿ. ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅದರೊಳಗಿದ್ದ ಇಲಿ ಏಕಾಏಕಿಯಾಗಿ ಕಾರಿನ ಡ್ಯಾಶ್ಬೋರ್ಡ್ ಬಳಿ ಬಂದಿದೆ.
ಈ ವೇಳೆ ಕಾರು ಡ್ರೈವ್ ಮಾಡ್ತಿದ್ದ ವ್ಯಕ್ತಿಯ ಗಮನ ಬೇರೆಡೆ ಹೋಗಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಕೆಳಗಿಳಿದು, ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ರಭಸಕ್ಕೆ ಕಾರು ಸ್ಥಳದಲ್ಲೇ ಸ್ಫೋಟಗೊಂಡಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ಕಾರು ಚಲಿಸುತ್ತಿದ್ದ ವ್ಯಕ್ತಿ, ಆತನ ಪತ್ನಿ ಹಾಗೂ ಮಗು ಗಂಭೀರವಾಗಿ ಗಾಯಗೊಂಡಿದೆ. ಇವರನ್ನು ತಕ್ಷಣವೇ ಶಾಹದೋಲ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.