ಭೋಪಾಲ (ಮಧ್ಯಪ್ರದೇಶ) : ಇಲ್ಲಿನ ಅಂಜಲಿ ವಿಹಾರ ಫೇಸ್-2 ನಲ್ಲಿ ಓರ್ವ 4 ವರ್ಷದ ಹೆಣ್ಣು ಮಗುವಿನ ಮೇಲೆ 5 ಬೀದಿನಾಯಿಗಳು ದಾಳಿ ನಡೆಸಿ ಆ ಮಗುವನ್ನೂ ಗಂಭೀರವಾಗಿ ಗಾಯಗೋಳಿಸಿದೆ. ಈ ಬಗ್ಗೆ ಮಧ್ಯಪ್ರದೇಶ ಮಾನವ ಹಕ್ಕುಗಳ ಆಯೋಗವು ಪುರಸಭೆ, ಆಡಳಿತ ಮತ್ತು ಆರೋಗ್ಯ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ಇದಕ್ಕೆ 7 ದಿನದಲ್ಲಿ ಉತ್ತರಿಸಲು ಹೇಳಲಾಗಿದೆ. ನೋಟಿಸ್ನಲ್ಲಿ, `2021 ರಲ್ಲಿ ಎಷ್ಟು ನಾಯಿಗಳ ನಸಬಂದಿ ಮಾಡಲಾಗಿದೆ ?’, `ರೇಬೀಸ್ (ಯಾವ ರೋಗದಿಂದ ನಾಯಿ ಹುಚ್ಚಾಗುತ್ತವೆಯೋ, ಆ ರೋಗ) ಆಗಿರುವ ಎಷ್ಟು ನಾಯಿಗಳನ್ನು ನಗರದಿಂದ ಹೊರಹಾಕಲಾಗಿದೆ ?’, ಮುಂತಾದ ಮಾಹಿತಿಗಳನ್ನು ಕೇಳಲಾಗಿದೆ.