News Karnataka Kannada
Monday, April 29 2024
ಮಧ್ಯ ಪ್ರದೇಶ

ಭೋಪಾಲ್: ಬಸ್‌ ಚಾಲಕನಿಗೆ 190 ವರ್ಷ ಜೈಲು

Law
Photo Credit :

ಭೋಪಾಲ್ : ಮಧ್ಯಪ್ರದೇಶದ ಪನ್ನಾದಲ್ಲಿ ಬಸ್ ಅಪಘಾತ ಸಂಭವಿಸಿದ 6 ವರ್ಷಗಳ ನಂತರ, 22 ಜನರ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ವಲಸೆ ಕಾರ್ಮಿಕರು ಸೇರಿ 22 ಜನರ ಸಾವಿಗೆ ಚಾಲಕನ ನಿರ್ಲಕ್ಷ್ಯ ಕಾರಣವೆನ್ನಲಾಗಿದ್ದು, ಸ್ಥಳೀಯ ನ್ಯಾಯಾಲಯ ಚಾಲಕನಿಗೆ 190 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 19 ಪ್ರತ್ಯೇಕ ಎಣಿಕೆಗಳಲ್ಲಿ ತಲಾ 10 ವರ್ಷಗಳ ಶಿಕ್ಷೆಯನ್ನು ಪ್ರತ್ಯೇಕವಾಗಿ ನೀಡಲಾಗಿದೆ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಮಾರಣಾಂತಿಕ ಅಪಘಾತದಲ್ಲಿ ಚಾಲಕನಿಗೆ ಇಷ್ಟೊಂದು ವರ್ಷ ಜೈಲು ಶಿಕ್ಷೆಯಾಗುತ್ತಿರುವುದು ಬಹುಶಃ ಇದೇ ಮೊದಲು ಎನ್ನಲಾಗಿದೆ.

ಅಪರಾಧಿ ಚಾಲಕ ಶಂಶುದ್ದೀನ್(47) ನರಹತ್ಯೆ ಮತ್ತು ದುಡುಕಿನ ಚಾಲನೆಗಾಗಿ ಶಿಕ್ಷೆಗೊಳಗಾದವರು. ಬಸ್ ಮಾಲೀಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕ ಕಪಿಲ್ ವ್ಯಾಸ್ ತಿಳಿಸಿದ್ದಾರೆ. ಮೇ 4, 2015 ರಂದು, 65 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ಬಸ್(MP 0533) ಮಡ್ಲ ಬೆಟ್ಟದ ಬಳಿ ನೀರಿಲ್ಲದ ಕಾಲುವೆಗೆ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡಿತು, ದುರಂತದಲ್ಲಿ 22 ಜನರು ಸಾವನ್ನಪ್ಪಿದರು ಮತ್ತು ಒಂದು ಡಜನ್ ಮಂದಿ ಗಾಯಗೊಂಡಿದ್ದರು.

ಬಸ್ ನಲ್ಲಿ ತುರ್ತು ನಿರ್ಗಮನ ದ್ವಾರವನ್ನು ಕಬ್ಬಿಣದ ರಾಡ್‌ ಗಳಿಂದ ನಿರ್ಬಂಧಿಸಲಾಗಿತ್ತು. ಅದರ ಸ್ಥಳದಲ್ಲಿ ಹೆಚ್ಚುವರಿ ಆಸನವನ್ನು ಅಳವಡಿಸಲಾಗಿತ್ತು ಎಂಬುದು ತನಿಖೆಯ ಸಮಯದಲ್ಲಿ ಕಂಡುಬಂದಿತ್ತು. ಪ್ರಯಾಣಿಕರು ನರಕಯಾತನೆಯಲ್ಲಿ ಸಿಲುಕಿಕೊಂಡರು. ಸತ್ತವರು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದರು. ಪ್ರಯಾಣಿಕರು ವೇಗ ಕಡಿಮೆ ಮಾಡುವಂತೆ ಮನವಿ ಮಾಡಿದರೂ, ಶಂಶುದ್ದೀನ್ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಚಾಲಕ ಮತ್ತು ಬಸ್ ಮಾಲೀಕ ಜ್ಞಾನೇಂದ್ರ ಪಾಂಡೆ ಸತ್ನಾ ನಿವಾಸಿಗಳಾಗಿದ್ದು, ಅಲ್ಲಿಂದಲೇ ಬಸ್ ಹೊರಟಿತ್ತು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 304(ಎ) (ನಿರ್ಲಕ್ಷ್ಯದ ಕಾರಣ ಸಾವು), 304(ಅಪರಾಧೀಯ ನರಹತ್ಯೆ), 279 ಮತ್ತು 337(ಎರಡೂ ದುಡುಕಿನ ಚಾಲನೆ), ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತನಿಖೆ ಮುಗಿದ ನಂತರ ವಿಶೇಷ ನ್ಯಾಯಾಧೀಶ ಆರ್.ಪಿ. ಸೋಂಕರ್ ಅವರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತು. ಶುಕ್ರವಾರ ಆದೇಶ ನೀಡಲಾಗಿದೆ. ಆದೇಶವು 10 ವರ್ಷಗಳ 19 ಶಿಕ್ಷೆಯನ್ನು ಪ್ರತ್ಯೇಕವಾಗಿ ನೀಡಲಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು