News Karnataka Kannada
Tuesday, April 30 2024
ಮಧ್ಯ ಪ್ರದೇಶ

ಭೋಪಾಲ್: ಐದನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯನ್ನು ಬಲಿಪಡೆದ ಆನ್‌ಲೈನ್ ಗೇಮ್

Suicide
Photo Credit :

ಭೋಪಾಲ್ : ಆನ್‌ಲೈನ್ ಆಟಗಳು ಎಚ್ಚರಿಕೆಯ ಗಂಟೆಯಾಗುತ್ತಿವೆ. ಐದನೇ ತರಗತಿ ಓದುತ್ತಿರುವ ಸೂರ್ಯಾಂಶು ಅನ್ನೊ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಕೇವಲ 11 ವರ್ಷದ ಸೂರ್ಯಾಂಶ್‌ನ ಸಾವಿನಿಂದ ಇಡೀ ಮಧ್ಯಪ್ರದೇಶವೇ ಆತಂಕಕ್ಕೆ ಒಳಗಾಗಿದ್ದು, ಗೃಹ ಸಚಿವ ನರೋತ್ತಮ್ ಮಿಶ್ರಾ ಅವ್ರು ಆನ್‌ಲೈನ್ ಆಟಗಳು ಗಂಭೀರ ವಿಷಯವಾಗಿದೆ.

ಇವುಗಳಿಗೆ ಕಡಿವಾಣ ಹಾಕಲು ನಾವು ರಾಜ್ಯದಲ್ಲಿ ಆನ್‌ಲೈನ್ ಆಟಗಳ ಕಾಯ್ದೆಯನ್ನ ತರುತ್ತಿದ್ದೇವೆ. ಇದರ ಕರಡು ಸಿದ್ಧವಾಗಿದೆ. ಅತಿ ಶೀಘ್ರದಲ್ಲಿ ಅದು ಸಾಕಾರಗೊಳ್ಳಲಿದೆ ಎಂದಿದ್ದಾರೆ.

ಅವಧಪುರಿಯ ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಸೂರ್ಯಾಂಶು, ಬುಧವಾರ ಮಧ್ಯಾಹ್ನ ಸೋದರ ಸಂಬಂಧಿ ಆಯುಷ್ (21) ಜತೆ ಎರಡನೇ ಮಹಡಿಯ ಕೊಠಡಿಯಲ್ಲಿ ಕುಳಿತು ಟಿವಿಯಲ್ಲಿ ಸಿನಿಮಾ ನೋಡುತ್ತಿದ್ದ. ನಂತ್ರ ಆಯುಷ್ ಕೆಳಗಿಳಿದು ಬಂದಿದ್ದು, ಸ್ವಲ್ಪ ಸಮಯದ ನಂತ್ರ ಮತ್ತೆ ಮಹಡಿಯ ಮೇಲೆ ಹೋಗಿದ್ದಾನೆ. ಆಗ ಸೂರ್ಯಾಂಶು ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇನ್ನು ಕೂಡಲೇ ಮನೆಯವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟೊತ್ತಿಗಾಗಲೇ ತಡವಾಗಿತ್ತು. ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದರು. ಅಂದ್ಹಾಗೆ, ಸೂರ್ಯಾಂಶು ಆನ್‌ಲೈನ್‌ ಗೇಮ್‌ಗಳ ವ್ಯಸನಿಯಾಗಿದ್ದು, ಸಿಕ್ಕಾಪಟ್ಟೆ ಫ್ರೀ ಫೈರ್ ಗೇಮ್ ಆಡುತ್ತಿದ್ದ ಎಂದು ಪೋಷಕರು ಹೇಳುತ್ತಾರೆ. ಇದೇ ಅವನ ಸಾವಿಗೆ ಕಾರಣವಾಗ್ಬೋದು ಅಂತಾ ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು