News Karnataka Kannada
Sunday, April 28 2024
ಮಧ್ಯ ಪ್ರದೇಶ

ಅಪ್ರಾಪ್ತೆಯನ್ನು ವಿವಾಹವಾಗಿ, ಅತ್ಯಾಚಾರ: ಪ್ರಕರಣ ದಾಖಲು

ತನಗೆ ಇಷ್ಟವಾದ ಅಡುಗೆ ಮಾಡಲಿಲ್ಲ  ಅನ್ನೋ ಕಾರಣಕ್ಕೆ ಲಿವ್ ಇನ್ ಪಾರ್ಟನರ್ ಆಗಿದ್ದ ಮಹಿಳೆಯನ್ನ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಹರಿಯಾಣದಲ್ಲಿ ನಡೆದಿದೆ.
Photo Credit :

ಭೋಪಾಲ್: ಹೋಟೆಲ್‌ ಕೊಠಡಿಯಲ್ಲಿ ಹದಿನೈದು ವರ್ಷದ ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಬಳಿಕ ಅದೇ ಕೊಠಡಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಯುವಕನನ್ನು ಬಂಧಿಸಿರುವ ಪೊಲೀಸರು ಆತನ‌ ವಿರುದ್ದ ಪೋಕ್ಸೋ ಕಾಯ್ದೆ ಮತ್ತು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.

ಬಾಲಕಿ 9ನೇ ತರಗತಿಯ ವಿದ್ಯಾರ್ಥಿನಿ. ಆಕೆಯನ್ನು ಹೋಟೆಲ್‌ಗೆ ಕರೆತರುವಾಗ ಆ ವ್ಯಕ್ತಿ ಆಕೆಯ ಹಣೆಗೆ ಸಿಂಧೂರ ಇಟ್ಟು ಕರೆತಂದಿದ್ದ. ಹೋಟೆಲ್‌ ಕೊಠಡಿಯಲ್ಲಿ ಸಾಂಕೇತಿಕ ವಿವಾಹವಾದ ಬಳಿಕ, ದೈಹಿಕ ಸಂಬಂಧ ಬೆಳೆಸಿದ್ದ. ಇದಾಗಿ ಕೆಲ ದಿನಗಳ ಅವಧಿಯಲ್ಲಿ ಮತ್ತೆ ಎರಡು ಬಾರಿ ದೈಹಿಕ ಸಂಪರ್ಕ ಮಾಡಿದ್ದ ಎಂದು ಹನುಮಗಂಜ್‌ ಪೊಲೀಸರು ತಿಳಿಸಿದ್ದಾರೆ.

ಈ ಸಾಂಕೇತಿಕ ವಿವಾಹ ಮತ್ತು ನಂತರದ ವಿದ್ಯಮಾನದ ವಿವರವನ್ನು ಬಾಲಕಿ ತನ್ನ ಮನೆಯವರಿಗೆ ಕೆಲ ದಿನಗಳ ಬಳಿಕ ತಿಳಿಸಿದ್ದಳು. ಕೂಡಲೇ ಅವರು, ಯುವಕನ ಮನೆಯವರನ್ನು ಸಂಪರ್ಕಿಸಿದ್ದರು.

ಆದರೆ, ಅವರು ಆಕೆಯನ್ನು ಸೊಸೆಯನ್ನಾಗಿ ಸ್ವೀಕರಿಸಲು ನಿರಾಕರಿಸಿದರು. ಯುವಕ ಕೂಡ ಬಾಲಕಿ ಜತೆಗಿನ ಸಂಪರ್ಕ ಕಡಿದುಕೊಂಡ. ಹೀಗಾಗಿ, ಬಾಲಕಿಯ ಮನೆಯವರು ನೀಡಿದ ದೂರಿನ ಪ್ರಕಾರ, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು