ಮಧ್ಯಪ್ರದೇಶ : ವಾಹನವೊಂದು ಅಪ್ರಾಪ್ತ ಬಾಲಕಿಯ ಮೇಲೆ ಮಾರಣಾಂತಿಕವಾಗಿ ಹರಿದ ಪರಿಣಾಮ ಆಕ್ರೋಶಗೊಂಡ ಗುಂಪೊಂದು ವಾಹನಕ್ಕೆ ಬೆಂಕಿ ಹಚ್ಚಿ ಅದರ ಚಾಲಕನನ್ನು ಬೆಂಕಿಗೆ ಎಸೆದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಅಲಿರಾಜ್ಪುರ ಜಿಲ್ಲೆಯಲ್ಲಿ ನಡೆದಿದೆ.
ಆರು ವರ್ಷದ ಬಾಲಕಿ ಮೇಲೆ ಪಿಕ್-ಅಪ್ ವಾಹನವೊಂದು ಹರಿದಿತ್ತು. ಪರಿಣಾಮ ಬಾಲಕಿ ಸಾವನ್ನಪ್ಪಿದ್ದಳು. ಇದರಿಂದ ಆಕ್ರೋಶಗೊಂಡ ಗುಂಪೊಂದು ವಾಹನಕ್ಕೆ ಬೆಂಕಿ ಹಚ್ಚಿ 43 ವರ್ಷದ ಚಾಲಕನನ್ನು ಥಳಿಸಿ ಬೆಂಕಿಗೆ ಎಸೆದಿದ್ದರು. ಇದರಿಂದಾಗಿ ತೀವ್ರ ಸುಟ್ಟ ಗಾಯಗಳಿಂದ ಬೆಂದ ಚಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಘಟನೆಯ ವೀಡಿಯೋ ಆಧರಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದರು.