News Karnataka Kannada
Tuesday, May 07 2024
ಕೇರಳ

ದೇವಸ್ಥಾನಕ್ಕೆ ‘ಆನೆ’ ಉಡುಗೊರೆ ಕೊಟ್ಟ ನಟಿ ಪ್ರಿಯಾಮಣಿ

Priyamani
Photo Credit : NewsKarnataka

ಕೇರಳ: ದಕ್ಷಿಣ ಭಾರತದ ಜನಪ್ರಿಯ ನಟಿ ಪ್ರಿಯಾಮಣಿ ಕೇರಳದ ದೇವಸ್ಥಾನವೊಂದಕ್ಕೆ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.  ಆದರೆ ಇದು ನಿಜವಾದ ಆನೆಯಲ್ಲ, ನಿಜವಾದ ಆನೆಯ ಗಾತ್ರದಲ್ಲೇ ಇರುವ ಯಾಂತ್ರಿಕ ಆನೆ.

ಪ್ರಿಯಾಮಣಿ ದೇವಸ್ಥಾನಕ್ಕೆ ಆನೆ ನೀಡಿರುವುದು ಯಾವುದೇ ಹರಕೆ ತೀರಿಸಲು ಅಥವಾ ಧಾರ್ಮಿಕ ಕಾರಣಕ್ಕೆ ಅಲ್ಲ ಎನ್ನಲಾಗಿದೆ.    ಪ್ರಿಯಾಮಣಿ ನೀಡಿರುವ ಯಾಂತ್ರಿಕ ಆನೆಯ ಹೆಸರು ಮಹದೇವನ್. ಕೇರಳದ ಕೊಚ್ಚಿಯಲ್ಲಿನ ತ್ರಿಕಾಯಿಲ್ ಮಹದೇವನ್ ದೇವಾಲಯಕ್ಕೆ ಈ ಆನೆಯನ್ನು ಪ್ರಿಯಾಮಣಿ ನೀಡಿದ್ದಾರೆ.

ಕೊಚ್ಚಿಯ ತ್ರಿಕಾಯಿಲ್ ಮಹದೇವನ್ ದೇವಾಲಯವು, ಇನ್ನು ಮುಂದೆ ನಾವು ಜೀವಂತ ಆನೆಯನ್ನು ದೇವಾಲಯದ ಯಾವುದೇ ಧಾರ್ಮಿಕ ಅಥವಾ ಇನ್ಯಾವುದೇ ಕಾರ್ಯಗಳಿಗೆ ಬಳಸುವುದಿಲ್ಲ. ಜೀವಂತ ಆನೆಯನ್ನು ಹಾಗೆ ಧಾರ್ಮಿಕ ಕಾರಣಕ್ಕೆ, ಪ್ರದರ್ಶನದ ಕಾರಣಕ್ಕೆ ಬಳಸುವುದು ಕ್ರೂರತೆ ಎಂದು ನಿರ್ಧರಿಸಿದೆ.

ಪೇಟಾ ಸಹ ದೇವಾಲಯದ ಈ ಕಾರ್ಯವನ್ನು ಮೆಚ್ಚಿಕೊಂಡಿದೆ. ದೇವಾಲಯದ ಈ ನಿರ್ಣಯದಿಂದ ಖುಷಿಯಾಗಿರುವ ಪ್ರಿಯಾಮಣಿ, ದೇವಾಲಯಕ್ಕೆ ಕೃತಕ ಆನೆಯನ್ನು ಉಡುಗೊರೆಯನ್ನಾಗಿ ನೀಡಿ ತಮ್ಮ ಅಭಿನಂದನೆಯನ್ನು ತಿಳಿಸಿದ್ದಾರೆ. ಪ್ರಿಯಾಮಣಿ ನೀಡಿರುವ ಕೃತಕ ಆನೆ, ನಿಜವಾದ ಆನೆಯ ಗಾತ್ರವನ್ನೇ ಹೊಂದಿದೆ. ಪ್ರಿಯಾಮಣಿ ನೀಡಿರುವ ಈ ಬೃಹತ್ ಆದ ಕೃತಕ ಆನೆ ದೇವಾಲಯದ ಮುಂದೆ ಸ್ಥಾನ ಪಡೆದುಕೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು