ತಿರುವನಂತಪುರಂ: ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡು ಒಂದೂವರೆ ವರ್ಷದ ಮಗು ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.
ಮೃತ ಬಾಲಕ ವೈಷ್ಣವ್ ಎಂದು ತಿಳಿದು ಬಂದಿದೆ. ಮೃತ ವೈಷ್ಣವ್, ಮಂಕಂಕುಜಿ ಮಲಯಿಲ್ ಪಾಡೆತತ್ತಿಲ್ ಹೌಸ್ನ ವಿಜೀಶ್ ಮತ್ತು ದಿವ್ಯಾ ದಾಸ್ ಅವರ ಅವಳಿ ಮಕ್ಕಳಲ್ಲಿ ಒಬ್ಬ.
ಘಟನೆ ವೇಳೆ ಮಗು ಹಾಗೂ ಆತನ ತಾಯಿ ಮಾತ್ರ ಮನೆಯಲ್ಲಿ ಇದ್ದರು. ಮಗುವಿನ ತಂದೆ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಪಾಲಕ್ಕಾಡ್ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಕೆಲಸಕ್ಕೆ ತೆರಳಿದ್ದರು.
ಬಾಲಕ ಚಕ್ಕುಲಿ ತಿಂದುಕೊಂಡು ಆಟವಾಡುತ್ತಿದ್ದ ವೇಳೆ ಏಕಾಏಕಿ ನುಂಗಿದ್ದಾನೆ. ಪರಿಣಾಮ ಚಕ್ಕುಲಿ ಗಂಟಲಲ್ಲಿ ಸಿಲುಕಿಕೊಂಡು ಉಸಿರಾಡಲು ಸಾಧ್ಯವಾಗಿಲ್ಲ. ಕೂಡಲೇ ಕೊಲ್ಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು ವೈಷ್ಣವ್ ಉಳಿಯಲಿಲ್ಲ.