News Karnataka Kannada
Friday, May 03 2024
ಕೇರಳ

ಮದುವೆ ಮನೆಗೆ ಒಂಟೆಯ ಮೇಲೆ ಎಂಟ್ರಿ ಕೊಟ್ಟ ವರ: ವಿಡಿಯೋ ವೈರಲ್‌

ಮದುವೆಗೆಂದು ವರನನ್ನು ಒಂಟೆ ಮೇಲೆ ಕರೆತಂದ ಘಟನೆ ಕೇರಳದಲ್ಲಿ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವರ ಸೇರಿ 26 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಣೂರಿನಲ್ಲಿ ಈ ಘಟನೆ ನಡೆದಿದೆ, ವರ ಕುದುರೆ ಅಥವಾ ವಾಹನಬಿಟ್ಟು ಒಂಟೆಯ ಮೇಲೆ ಬಂದಿದ್ದು ತೀವ್ರ ವಿವಾದಕ್ಕೆ ಗುರಿಯಾಗಿತ್ತು.
Photo Credit :

ಕೇರಳ: ಮದುವೆಗೆಂದು ವರನನ್ನು ಒಂಟೆ ಮೇಲೆ ಕರೆತಂದ ಘಟನೆ ಕೇರಳದಲ್ಲಿ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ವರ ಸೇರಿ 26 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಣೂರಿನಲ್ಲಿ ಈ ಘಟನೆ ನಡೆದಿದೆ, ವರ ಕುದುರೆ ಅಥವಾ ವಾಹನಬಿಟ್ಟು ಒಂಟೆಯ ಮೇಲೆ ಬಂದಿದ್ದು ತೀವ್ರ ವಿವಾದಕ್ಕೆ ಗುರಿಯಾಗಿತ್ತು.

ವಲಪಟ್ಟಣ ಮೂಲದ ವರಣ್ ರಿಜ್ವಾನ್ ಹಾಗೂ ಆತನೊಂದಿಗೆ ಬಂದಿದ್ದ 25 ಮಂದಿ ವಿರುದ್ಧ ಚಾಕರಕಲ್ಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ವಾರ ನಡೆದ ಮದುವೆಯ ದೃಶ್ಯಾವಳಿಗಳು ಸದ್ಯ  ವೈರಲ್ ಆಗಿವೆ.

ಅತಿಯಾದ ಸಂಭ್ರಮಾಚರಣೆಯಿಂದಾಗಿ ಕಣ್ಣೂರು ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯನ್ನೂ ಬಂದ್ ಮಾಡಲಾಗಿತ್ತು. ಇದರಿಂದಾಗಿ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಮತ್ತು ಆಂಬ್ಯುಲೆನ್ಸ್ ಸೇರಿದಂತೆ ಹಲವು ವಾಹನಗಳು ಸಿಲುಕಿಕೊಂಡಿದ್ದವು. ಹೀಗಾಗಿ ರಸ್ತೆ ತಡೆ ನಿರ್ಮಿಸಿದವರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಬಲಪ್ರಯೋಗ ಮಾಡಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು