ದೆಹಲಿ: ವಿಮಾನ ನಿಲ್ದಾಣದ ಬಳಿ ಇರುವ ಏರೋಸಿಟಿಯ ಐಷಾರಾಮಿ ಹೋಟೆಲ್ನಲ್ಲಿ 15 ದಿನಗಳ ಕಾಲ ಯಾವುದೇ ಹಣವನ್ನು ಪಾವತಿಸದೆ ತಂಗಿದ್ದ ಆರೋಪದ ಮೇಲೆ 37 ವರ್ಷದ ಆಂಧ್ರದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಮಹಿಳೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಹೋಟೆಲ್ನಲ್ಲಿ ಲಕ್ಷಗಟ್ಟಲೆ ವಂಚಿಸಿದ್ದಾಳೆ. ಆಹಾರ, ಪಾನೀಯ ಮತ್ತು ಸ್ಪಾಗೆ ಯುಪಿಐ ಮೂಲಕ ಹಣ ಪಾವತಿಸುತ್ತಿದ್ದಳು, ಆದರೆ ಮೊತ್ತ ಮಾತ್ರ ಹೋಟೆಲ್ನ ಬ್ಯಾಂಕ್ ಖಾತೆಗೆ ಹೋಗಿರಲಿಲ್ಲ ಎಂಬುದು ನಂತರ ತಿಳಿದುಬಂದಿದೆ.
ಈ ಬಗ್ಗೆ ಹೋಟೆಲ್ ಸಿಬ್ಬಂದಿ ಬಂದು ಕೇಳಿದಾಗ ಗಲಾಟೆ ಮಾಡಿದ್ದಾರೆ. ಆಕೆಯ ಈ ಅವಧಿಯ ಸ್ಪಾ ಬಿಲ್ 2.11 ಲಕ್ಷ ರೂ. ಆಗಿದೆ. ಹೋಟೆಲ್ನ ಒಟ್ಟು ಮೊತ್ತ 5.88 ಲಕ್ಷ ರೂ. ಆಗಿದೆ.
ಹಣದ ಬಗ್ಗೆ ಹೋಟೆಲ್ ಸಿಬ್ಬಂದಿ ಕೇಳಿದಾಗ, ಆಕೆ ಪರಾರಿಯಾಗಲು ಪ್ರಯತ್ನಿಸಿದ್ದಳು ಎಂದು ಅವರು ತಿಳಿಸಿದ್ದಾರೆ. ಆಂಧ್ರಪ್ರದೇಶದ ಝಾನ್ಸಿ ರಾಣಿ ಸ್ಯಾಮ್ಯುಯೆಲ್ ಎಂಬ ಮಹಿಳೆ ಡಿಸೆಂಬರ್ 13 ರಂದು ಹೋಟೆಲ್ ಅನ್ನು ಬುಕ್ ಮಾಡಿದ್ದರು. ಪೊಲೀಸ್ ಅಧಿಕಾರಿಯ ಪ್ರಕಾರ, ಪುಲ್ಮನ್ ಹೋಟೆಲ್ ಅಧಿಕಾರಿಗಳು ತಮ್ಮ ದೂರಿನಲ್ಲಿ ಸ್ಯಾಮ್ಯುಯೆಲ್ ಹೋಟೆಲ್ ಸೇವೆಗಳಿಗೆ ಮೋಸದ ಪಾವತಿ ವಿಧಾನಗಳನ್ನು ಬಳಸಿದ್ದಾರೆ.