News Karnataka Kannada
Sunday, April 28 2024
ಕೇರಳ

ಮದ್ವೆ ಆಗಿ ಕೇವಲ 3 ತಿಂಗಳಾಗಿದ್ರೂ ಪ್ರೀತಿ ನೆಪದಲ್ಲಿ ವಂಚನೆ

Kerala Accused 26 6 21
Photo Credit :

ತಿರುವನಂತಪುರಂ: ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿದ ಆರೋಪದ ಮೇಲೆ 21 ವರ್ಷದ ಯುವಕನನ್ನು ಕೇರಳದ ಕಜಕ್ಕೂಟಮ್​ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಚಾರಿಟಿ ಕೆಲಸದ ಮೇಲೆ ಇನ್​ಸ್ಟಾಗ್ರಾಂ ಮೂಲಕ ಬಾಲಕಿಯನ್ನು ಆರೋಪಿ ಸಂಪರ್ಕಿಸಿದ್ದ. ಬಂಧಿತನನ್ನು ಅಖಿನೇಶ್​ ಅಶೋಕ್​ ಎಂದು ಗುರುತಿಸಲಾಗಿದೆ. ಈತ ಮುತ್ತಾಥರಾ ನಿವಾಸಿ.
ಆರೋಪಿ ಅಶೋಕ್​ ಮೂರು ತಿಂಗಳ ಹಿಂದೆಯೇ ಬೇರೊಂದು ಮದುವೆ ಆಗಿದ್ದಾನೆ. ಆದರೆ, ಆನ್​ಲೈನ್​ ಮೂಲಕ ಮತ್ತೊಂದು ಯುವತಿಯ ಸಂಪರ್ಕವನ್ನು ಅಶೋಕ್​ ಸಾಧಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 2020ರ ಸೆಪ್ಟೆಂಬರ್​ನಿಂದ ಅನೇಕ ಬಾರಿ ಅಪ್ರಾಪ್ತೆಯನ್ನು ಆರೋಪಿ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಇದೀಗ ಆರು ತಿಂಗಳ ಗರ್ಭಿಣಿ ಆಗಿರುವ ಅಪ್ರಾಪ್ತೆಯನ್ನು ಆಶ್ರಯ ಮನೆಯಲ್ಲಿಟ್ಟು ನೋಡಿಕೊಳ್ಳಲಾಗುತ್ತಿದೆ. ಅಪ್ರಾಪ್ತೆಯು ತನ್ನ ತಾಯಿ, ಮಲತಂದೆ ಮತ್ತು ಅಜ್ಜಿಯ ಜತೆ ವಾಸವಿದ್ದಳು. ಆಕೆಯ ತಾಯಿ ಕುಟುಂಬವನ್ನು ಬಿಟ್ಟು ಬೇರೋಬ್ಬನನ್ನು ಮದುವೆಯಾಗಿದ್ದಾರೆ. ಅಜ್ಜಿ ಮನೆಯಲ್ಲಿ ಇರುವಾಗ ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು