News Karnataka Kannada
Monday, April 29 2024
ಕೇರಳ

ಖಾಸಗಿ ಸ್ಥಳದಲ್ಲಿ ಮದ್ಯ ಸೇವಿಸುವುದು ಯಾವುದೇ ಅಪರಾಧಕ್ಕೆ ಗುರಿಯಾಗುವುದಿಲ್ಲ: ಕೇರಳ ಹೈಕೋರ್ಟ್

Kerala High Court Dt 17 6 21 Dt 1762113 1 Newsk 7090924364
Photo Credit :

ಕೊಚ್ಚಿ: ಯಾರಿಗೂ ತೊಂದರೆಯಾಗದಂತೆ ಖಾಸಗಿ ಸ್ಥಳದಲ್ಲಿ ಮದ್ಯ ಸೇವಿಸುವುದು  ಯಾವುದೇ ಅಪರಾಧಕ್ಕೆ ಗುರಿಯಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.ಇದೇ ವೇಳೆ ನ್ಯಾಯಪೀಠ  ಕೇವಲ ಮದ್ಯದ ವಾಸನೆಯ ಆಧಾರದ ಮೇಲೆ ವ್ಯಕ್ತಿಯು ಅಮಲೇರಿದ ಅಥವಾ ಯಾವುದೇ ಮದ್ಯದ ಪ್ರಭಾವಕ್ಕೆ ಒಳಗಾಗಿದ್ದಾನೆ ಎಂದು ಅರ್ಥೈಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

 ಪ್ರಕರಣದ ಹಿನ್ನಲೆ

ದಿನಾಂಕ 26/02/2013 ರಂದು ಅರ್ಜಿದಾರರಾದ 38 ವರ್ಷದ ಬಿ.ಎಸ್. ಸಲೀಂ ಕುಮಾರ್ ಎನ್ನುವವರನ್ನು ಆರೋಪಿಯನ್ನು ಗುರುತಿಸುವ ಉದ್ದೇಶದಿಂದ ಠಾಣೆಗೆ ಕರೆಸಿಕೊಂಡು ಬರಲಾಗಿತ್ತು, ಆ ವೇಳೇಯಲ್ಲಿ, ಮದ್ಯದ ಅಮಲಿನಲ್ಲಿದ್ದನೆಂದು ಆತನ ವಿರುದ್ಧ ಬದಿಯಡ್ಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ದ ಅಪರಾಧ ಪ್ರಕರಣ ದಾಖಲಾಗಿ, ಆತನ ವಿರುದ್ಧ ಚಾರ್ಜ್ ಶೀಟ್  ದಾಖಲಿಸಿದ್ದರು. ಇದನ್ನೂ ಪ್ರಶ್ನಿಸಿ, ರದ್ದುಗೊಳಿಸುವಂತೆ ಹೈಕೋರ್ಟ್‌ಗೆ  ಮನವಿ ಮಾಡಿಕೊಂಡಿದ್ದರು.

ಇದೇ ವೇಳೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೋಫಿ ಥಾಮಸ್‌ ಎಫ್‌ಐಆರ್‌  ರದ್ದು ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು