News Karnataka Kannada
Monday, April 29 2024
ಕೇರಳ

ಕೇರಳ : ನಿಫಾ ವೈರಸ್, 11 ಮಂದಿಗೆ ಸೋಂಕಿನ ಲಕ್ಷಣ ಪತ್ತೆ

Nifha Virus
Photo Credit :

ಕೇರಳ :  ಕೇರಳದ ಕೋಯಿಕೋಡ್‌ನಲ್ಲಿ ನಿಫಾ ವೈರಸ್ ಸೋಂಕಿಗೆ ಬಾಲಕ ಮೃತಪಟ್ಟಿದ್ದು, ಅವರ ತಾಯಿ ಸೇರಿದಂತೆ 11 ಮಂದಿಗೆ ಸೋಂಕಿನ ಲಕ್ಷಣಗಳು ಕಾಣಿಸಿವೆ. ನಿಫಾ ವೈರಸ್ ಸೋಂಕಿಗೆ ಒಳಗಾಗಿರುವ ಲಕ್ಷಣಗಳಿರುವ ಎಲ್ಲರ ಮಾದರಿ ಕಲೆಹಾಕಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.

ಬಾಲಕನ ಮನೆಯ ಸುತ್ತಮುತ್ತ ಪಶುಸಂಗೋಪನೆ ತಂಡ ಪರಿಶೀಲನೆ ನಡೆಸಿದೆ. ಅವರ ಮನೆಯ ಎರಡು ಆಡುಗಳಿಂದಲೂ ಮಾದರಿ ಸಂಗ್ರಹಿಸಲಾಗಿದೆ. ಬಾವಲಿಗಳ ಮನೆಯ ಬಳಿ ಇರುವ ಮರದ ಹಣ್ಣುಗಳನ್ನು ಕಚ್ಚಿರಬಹುದು ಎನ್ನುವ ಕಾರಣಕ್ಕೆ ಮರದ ಸ್ಯಾಂಪಲ್ ಕೂಡ ಪಡೆಯಲಾಗಿದೆ.

ಈಗಾಗಲೇ ರಾಜ್ಯ ಆರೋಗ್ಯ ಇಲಾಖೆ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿ ಸಂಪರ್ಕಕ್ಕೆ ಬಂದ 251 ಮಂದಿಯನ್ನು ಗುರುತಿಸಿದೆ. ಅವುಗಳಲ್ಲಿ 54 ಮಂದಿ ರಿಸ್ಕ್‌ನಲ್ಲಿದ್ದಾರೆ. ಯಾರಿಗಾದರೂ ರೋಗ ಲಕ್ಷಣಗಳು ಇವೆಯೇ? ಅಥವಾ ಸಂಪರ್ಕದಿಂದ ಹೊರಗುಳಿದಿದ್ದಾರಾ ಎಂದು ಪರೀಕ್ಷಿಸಲು ಇಂದಿನಿಂದ ಮನೆ ಮನೆ ಕಣ್ಗಾವಲು ನಡೆಸಲು ಪ್ರಾಂಭಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು