ಕೇರಳ: ಎರಡೂವರೆ ತಿಂಗಳ ನಂತರ ಕೇರಳದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೊಮ್ಮೆ ಸಾವಿರ ಗಡಿ ದಾಟಿದೆ.
ಕಳೆದ 24 ಗಂಟೆಗಳಲ್ಲಿ 1,197 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸದ್ಯ ರಾಜ್ಯದಲ್ಲಿ 5728 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ರೇಟ್ 7.07% ರಷ್ಟಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,745 ಹೊಸ ಪ್ರಕರಣಗಳು ದಾಖಲಾಗಿದ್ದು, ನಿನ್ನೆಯಿಂದ 17.4% ಹೆಚ್ಚಳವಾಗಿದೆ. ಇದು ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು 4,31,60,832 ಕ್ಕೆ ಏರಿಕೆ ಮಾಡಿದೆ. ಸದ್ಯ ಭಾರತದಲ್ಲಿ 18,386 ಪ್ರಕರಣಗಳು ಸಕ್ರಿಯವಾಗಿವೆ.