ಜಾರ್ಖಂಡ್: ಜಾರ್ಖಂಡ್ನ ಜಮ್ತಾರಾ ಬಳಿ ಭೀಕರ ರೈಲು ದುರಂತ ಸಂಭವಿಸಿದ್ದು, ಸಂಜೆ ರೈಲಿಗೆ ಸಿಲುಕಿ ಕನಿಷ್ಠ ಹನ್ನೆರಡು ಜನರು ಪ್ರಾಣ ಕಳೆದುಕೊಂಡಿದ್ದರೆ, ಹಲವರು ಗಾಯಗೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆ ಜಮ್ತಾರಾ-ಕರ್ಮತಾಂಡ್ನ ಕಲ್ಜಾರಿಯಾ ಬಳಿ ನಡೆದಿದೆ.
ರೈಲ್ವೆ ಆಡಳಿತ, ರೈಲ್ವೆ ಪೊಲೀಸರು ಮತ್ತು ಸ್ಥಳೀಯ ಆಡಳಿತವು ಸ್ಥಳಕ್ಕೆ ತಲುಪಿದೆ. ಗಾಯಗೊಂಡವರನ್ನ ಆಸ್ಪತ್ರೆಗಳಿಗೆ ದಾಖಲಿಸಲು ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.