News Karnataka Kannada
Saturday, May 04 2024
ಜಮ್ಮು-ಕಾಶ್ಮೀರ

ಜಮ್ಮು: ರಜೌರಿಯಲ್ಲಿ ಉಗ್ರರ ಅಡಗುದಾಣ ಮೇಲೆ ದಾಳಿ : ಶಸ್ತ್ರಾಸ್ತ್ರಗಳು ವಶ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರ ಅಡಗುದಾಣದ ಮೇಲೆ ಭದ್ರತಾ ಪಡೆಗಳು ಭಾನುವಾರ ದಾಳಿ ನಡೆಸಿದ್ದು, 8 ಕಚ್ಚಾ ಬಾಂಬ್‌, 2 ವೈರ್‌ಲೆಸ್‌ ಸೆಟ್‌ಗಳು ಹಾಗೂ ಕೆಲವು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Photo Credit : NewsKarnataka

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರ ಅಡಗುದಾಣದ ಮೇಲೆ ಭದ್ರತಾ ಪಡೆಗಳು ಭಾನುವಾರ ದಾಳಿ ನಡೆಸಿದ್ದು, 8 ಕಚ್ಚಾ ಬಾಂಬ್‌, 2 ವೈರ್‌ಲೆಸ್‌ ಸೆಟ್‌ಗಳು ಹಾಗೂ ಕೆಲವು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಶಪಡಿಸಿಕೊಂಡಿರುವ ವಸ್ತುಗಳು ತುಕ್ಕು ಹಿಡಿದಿದ್ದು ಎರಡು ದಶಕಗಳ ಹಿಂದೆ ಜಿಲ್ಲೆಯಲ್ಲಿ ಉಗ್ರರಿಂದ ಮುಕ್ತಿಗೊಳಿಸುವುದಕ್ಕೆ ಮುನ್ನ ಈ ಅಡಗುದಾಣ ಇತ್ತು ಎನ್ನವುದು ಸಂಕೇತ ಇದು ಎಂದು ಅಧಿಕಾರಿಗಳು ಹೇಳಿದ್ದಾರೆ. ರಜೌರಿ ನಗರದ 30 ಕಿ.ಮಿ ದೂರದಲ್ಲಿ ತನ್ನಮಂಡಿ ಪ್ರದೇಶದ ಅಜ್ಮತ್‌ಬಾದ್‌ ಗ್ರಾಮದಲ್ಲಿ ಪೊಲೀಸರು ಸೇನಾಪಡೆಗಳ ಬೆಂಬಲದೊಂದಿಗೆ ಶೋಧ ನಡೆಸಿ ಅಡಗುದಾಣ ಪತ್ತೆ ಹಚ್ಚಿದ್ದಾರೆ.

ಇದರಲ್ಲಿ ಇದರಲ್ಲಿ ಬಾಂಬ್‌ಗಳ ಪೈಕಿ ಒಂದು ಬಾಂಬ್‌ 1 ಕೆ.ಜಿ ತೂಕವಿದ್ದೆರೆ ಮತ್ತೊಂದು ಅರ್ಧ ಕೆ.ಜಿ ತೂಕವಿದ್ದವು ಎಂದು ಅವರು ಹೇಳಿದ್ದಾರೆ. ಅಲ್ಲದೇ ಎ.ಕೆ-47 ರೈಫಲ್‌ 3 ಕೋಠಿ, 2 ವೈರ್‌ಲೆಸ್‌ ಸೇರಿ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು