ಜಮ್ಮು: ಪತ್ನಿಯನ್ನು ಕೊಲೆಗೈದ ಆರೋಪದ ಮೇಲೆ ಪೊಲೀಸ್ ಪೇದೆಯೊಬ್ಬನನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಬುಧವಾರ ಬಂಧಿಸಲಾಗಿದೆ.
ಕಥುವಾದಲ್ಲಿ ಜಿಲ್ಲಾ ಪೊಲೀಸ್ ಲೈನ್ಸ್ ನಲ್ಲಿ ನಿಯೋಜಿತರಾಗಿರುವ ವಿಶೇಷ ಪೊಲೀಸ್ ಅಧಿಕಾರಿ (ಎಸ್ ಪಿ ಒ) ಮೋಹನ್ ಲಾಲ್ ಕಳೆದ ಮೂರು ದಿನಗಳಿಂದ ರಜೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ತನ್ನ 32 ವರ್ಷದ ಪತ್ನಿ ಆಶಾ ದೇವಿಯನ್ನು ಬರ್ಬರವಾಗಿ ಕೊಲೆ ಮಾಡಿದ ನಂತರ ಅವರು ಮಂಗಳವಾರ ಬಿಲ್ಲಾವರ್ ತಹಸಿಲ್ನ ಧರಾಲ್ಟಾ ಗ್ರಾಮದಲ್ಲಿರುವ ತಮ್ಮ ನಿವಾಸದಿಂದ ಪರಾರಿಯಾಗಿದ್ದಾರೆ.
“ಕುಟುಂಬ ಕಲಹದ ಹಿನ್ನೆಲೆಯಲ್ಲಿ ಎಸ್ ಪಿ ಒ ತನ್ನ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಅವನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಮತ್ತು ಕೊಲೆಯಾದಾಗ ಅವನ ಹೆಂಡತಿ ಗರ್ಭಿಣಿಯಾಗಿದ್ದಳು.
ಎಸ್ ಪಿ ಒ ಅವರನ್ನು ಬಂಧಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.