News Karnataka Kannada
Friday, May 10 2024
ಜಮ್ಮು-ಕಾಶ್ಮೀರ

ಜಮ್ಮು-ಕಾಶ್ಮೀರ: ಗಡಿಯಲ್ಲಿ ಮತ್ತೊಮ್ಮೆ ಆಕ್ರಮಣಕಾರಿ ಕೃತ್ಯ ಎಸಗಿದ ಪಾಕಿಸ್ತಾನ

Jammu and Kashmir: Pakistan commits yet another act of aggression along the border
Photo Credit : Wikimedia

ಜಮ್ಮು-ಕಾಶ್ಮೀರ: ಗಡಿಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ಆಕ್ರಮಣಕಾರಿ ಕೃತ್ಯ ಎಸಗಿದೆ. ಜಮ್ಮು ಮತ್ತು ಕಾಶ್ಮೀರದ ಕನಾಚಕ್ ಸೆಕ್ಟರ್‌ನ ಅಂತರಾಷ್ಟ್ರೀಯ ಗಡಿಯ ಬಳಿಯ ವಾಯುಪ್ರದೇಶದಲ್ಲಿ  ಬಿಎಸ್‌ಎಫ್ ಸಿಬ್ಬಂದಿ ಡ್ರೋನ್ ಅನ್ನು ಗುರುತಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ರಾತ್ರಿ 9.40ಕ್ಕೆ ಆಕಾಶದಲ್ಲಿ ಡ್ರೋನ್‌ನ ಕೆಂಪು ಬೆಳಕು ಕಾಣಿಸಿಕೊಂಡ ಕೂಡಲೇ ಬಿಎಸ್ಎಫ್ ಸಿಬ್ಬಂದಿ ಡ್ರೋನ್ ಮೇಲೆ ಗುಂಡು ಹಾರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಗುಂಡು ಹಾರಿಸುತ್ತಿದ್ದಂತೆ ಡ್ರೋನ್‌ ಹಿಂತಿರುಗಿದೆ. ಈ ಘಟನೆಯೊಂದಿಗೆ ಅಧಿಕಾರಿಗಳು ಕನಾಚಕ್ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ.  ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎನ್ನಲಾಗಿದೆ. ಪಾಪಿ ಪಾಕಿಸ್ತಾನವು ಡ್ರೋನ್‌ಗಳ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಕಳುಹಿಸುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು