News Karnataka Kannada
Sunday, April 14 2024
Cricket
ಜಮ್ಮು-ಕಾಶ್ಮೀರ

ಜಮ್ಮುಕಾಶ್ಮೀರ: ಉಗ್ರರ ವಿರುದ್ದದ ಕಾರ್ಯಾಚರಣೆಯಲ್ಲಿ ಹುತಾತ್ಮನಾದ ಸೇನಾ ಶ್ವಾನ ಆಕ್ಸೆಲ್

Jammu and Kashmir: Army dog Axle martyred in anti-militancy operation
Photo Credit : Twitter

ಜಮ್ಮುಕಾಶ್ಮೀರ:  ಬಾರಾಮುಲ್ಲಾದಲ್ಲಿ ನಡೆದ ಉಗ್ರರ ವಿರುದ್ದದ ಕಾರ್ಯಾಚರಣೆಯಲ್ಲಿ ಸೇನಾ ಶ್ವಾನ ಆಕ್ಸೆಲ್ ಹುತಾತ್ಮನಾಗಿದೆ. ಶನಿವಾರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ವಾಣಿಗಂಬಳದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಂದರ್ಭ ಭಯೋತ್ಪಾದಕರು ಮೂರು ಬಾರಿ ಗುಂಡು ಹಾರಿಸಿದ್ದು, ಈ ವೇಳೆ ಸೇನಾ ಶ್ವಾನ ‘ಆಕ್ಸೆಲ್’ ಪ್ರಾಣಾರ್ಪಣೆ ಮಾಡಿದೆ.

ಅಲೆಕ್ಸ್, ಕೇವಲ ಎರಡು ವರ್ಷ ವಯಸ್ಸಿನ ತಿಳಿ ಕಂದು ಬಣ್ಣದ ಬೆಲ್ಜಿಯನ್ ಮಾಲಿನೊಯಿಸ್ ತಳಿಯ ಶ್ವಾನವಾಗಿದ್ದು, 26ನೇ ಆರ್ಮಿ ಶ್ವಾನ ಘಟಕದ ಭಾಗವಾಗಿದ್ದರು. ಅಲೆಕ್ಸ್‌ನನ್ನು 29 ರಾಷ್ಟ್ರೀಯ ರೈಫಲ್ಸ್ ಘಟಕದೊಂದಿಗೆ 10ನೇ ಸೆಕ್ಟರ್ ಆರ್‌ಆರ್ ಪ್ರತಿ ಬಂಡಾಯ ಪಡೆಗಳ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಆಲೆಕ್ಸ್ ಹಾಗೂ ಮತ್ತೊಂದು ಆರ್ಮಿ ಡಾಗ್ ‘ಬಾಲಾಜಿ’ ಈ ಕಾರ್ಯಾಚರಣೆಯ ಭಾಗವಾಗಿದ್ದರು.

ಆರಂಭದಲ್ಲಿ, ಕಟ್ಟಡದ ಒಳಗೆ ಬಾಲಾಜಿಯನ್ನು ಕಳುಹಿಸಲಾಯಿತು. ಬಾಲಾಜಿ ಒಳಗಿನ ಕಾರಿಡಾರ್ ಅನ್ನು ಸ್ಯಾನಿಟೈಸ್ ಮಾಡಿತ್ತು. ಬಾಲಾಜಿಯನ್ನು ಹಿಂಬಾಲಿಸಿದ ಆಕ್ಸೆಲ್ ಮೊದಲ ಕೊಠಡಿಯೊಳಗೆ ಹೋಗಿ ತೆರವುಗೊಳಿಸಿತು. ಆದರೆ, ಆತ ಎರಡನೇ ಕೊಠಡಿಗೆ ಪ್ರವೇಶಿಸಿದಾಗ ಉಗ್ರರು ಆತನ ಮೇಲೆ ಗುಂಡು ಹಾರಿಸಿದ್ದು, ಆಕ್ಸೆಲ್ ಹುತಾತ್ಮನಾಗಿದೆ.

 

ಇದಾದ ಬಳಿಕವೂ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು,ಭಯೋತ್ಪಾದಕ ಅಖ್ತರ್ ಹುಸೇನ್ ಭಟ್ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

5 ಗಂಟೆಗಳ ಕಾರ್ಯಾಚರಣೆ ಮುಗಿದ ನಂತರ ಆಕ್ಸೆಲ್ ಪಾರ್ಥಿವ ಶರೀರವನ್ನು ಕಟ್ಟಡದಿಂದ ಹೊರತೆಗೆಯಲಾಯಿತು ಮತ್ತು ಮರಣೋತ್ತರ ಪರೀಕ್ಷೆಗಾಗಿ 54 ಸಶಸ್ತ್ರ ಪಡೆಗಳ ಪಶುವೈದ್ಯಕೀಯ ಆಸ್ಪತ್ರೆಗೆ ಕಳುಹಿಸಲಾಯಿತು. ವರದಿಗಳ ಪ್ರಕಾರ, ಬುಲೆಟ್ ಪ್ರವೇಶ ಮತ್ತು ನಿರ್ಗಮನದ ಗಾಯಗಳನ್ನು ಹೊರತುಪಡಿಸಿ ಆಕ್ಸೆಲ್‌ ದೇಹದಲ್ಲಿ ಹತ್ತು ಹೆಚ್ಚುವರಿ ಗಾಯಗಳು ಮತ್ತು ಎಲುಬು ಮುರಿತವಾಗಿತ್ತು ಎಂದು ಸೇನಾ ಮೂಲಗಳು ವರದಿ ಮಾಡಿವೆ.

ಆಕ್ಸೆಲ್ ದಕ್ಷ K9 ಅಧಿಕಾರಿಯಾಗಿದ್ದು, ಈ ಹಿಂದೆ ಹಲವಾರು ಯಶಸ್ವಿ ಕಾರ್ಯಾಚರಣೆಗಳ ಭಾಗವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆಕ್ಸೆಲ್‌ ನಿಧನದಿಂದ ಇಡೀ ಘಟಕವು ದುಃಖಿತವಾಗಿದೆ .

ಇಂದು ಆಕ್ಸೆಲ್‌ನ ಅಂತಿಮ ಸಂಸ್ಕಾರವನ್ನು ಕಿಲೋ ಫೋರ್ಸ್ ಕಮಾಂಡರ್‌ನಲ್ಲಿ ನಡೆಸಲಾಯಿತು. ಸೇನೆಯ ಅಧಿಕಾರಿಗಳು, ಸಿಬ್ಬಂದಿ ಆಗಲಿದ ಶ್ವಾನಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ 26 ಎಡಿಯು ಆವರಣದಲ್ಲಿ ಸಮಾಧಿ ಮಾಡಲಾಯಿತು. ಸಾಮಾಜಿಕ ಜಾಲತಾಣದಲ್ಲಿ ಗಣ್ಯರು ಸೇರಿದಂತೆ ಅನೇಕರು ಹುತಾತ್ಮನಾದ ಆಕ್ಸೆಲ್‌ಗೆ ಅಂತಿಮ ನಮನ ಸಲ್ಲಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು