News Karnataka Kannada
Saturday, May 04 2024
ಜಮ್ಮು-ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ: ಮುಂದಿನ 24 ಗಂಟೆಗಳಲ್ಲಿ ಲಘು ಮಳೆ, ಹಿಮ ಮುಂದುವರಿಕೆ

Untitled 2 Recovered Recovered Recovered
Photo Credit :

ಶ್ರೀನಗರ: ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನಲ್ಲಿ ಹವಾಮಾನವು ಪ್ರತಿಕೂಲವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮಧ್ಯಂತರ ಲಘು ಮಳೆ ಮತ್ತು ಹಿಮ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನ ಎತ್ತರದ ಪ್ರದೇಶಗಳಲ್ಲಿ ಹೊಸ ಹಿಮಪಾತವಾಗಿದೆ. ಅಮರನಾಥ ಗುಹಾಂತರ ದೇವಾಲಯ ಪ್ರದೇಶ, ಗುಲ್ಮಾರ್ಗ್ ನ ಅಫ್ಫರ್ವತ್ ಬೆಟ್ಟಗಳು, ಜೋಜಿಲಾ ಪಾಸ್ ಮತ್ತು ಇತರ ಎತ್ತರದ ಪ್ರದೇಶಗಳಲ್ಲಿ ಹಿಮಪಾತವಾಗಿದೆ.

ಮುಂದಿನ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ನಲ್ಲಿ ಲಘು ಮಳೆ/ಹಿಮ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ರೀನಗರದಲ್ಲಿ 12.6, ಪಹಲ್ಗಾಮ್ನಲ್ಲಿ 7.7 ಮತ್ತು ಗುಲ್ಮಾರ್ಗ್ನಲ್ಲಿ 3.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ಲಡಾಖ್ ಪ್ರದೇಶದಲ್ಲಿ, ದ್ರಾಸ್ ಪಟ್ಟಣದಲ್ಲಿ 4.2, ಲೇಹ್ 5.2 ಮತ್ತು ಕಾರ್ಗಿಲ್ 10.2 ರಾತ್ರಿಯ ಅತ್ಯಂತ ಕಡಿಮೆ ತಾಪಮಾನವಾಗಿದೆ.

ಜಮ್ಮುವಿನಲ್ಲಿ 19.7, ಕತ್ರಾದಲ್ಲಿ 18.2, ಬಟೋಟೆಯಲ್ಲಿ 10.3, ಬನಿಹಾಲ್ನಲ್ಲಿ 9.6 ಮತ್ತು ಭದೇರ್ವಾದಲ್ಲಿ 10ರಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು