News Karnataka Kannada
Monday, April 29 2024
ಅಂಕಣ

ಗುಲಾಬಿ ಹೂವಿನ ಎಸಳಿನಲ್ಲಿದೆ ಸೌಂದರ್ಯ ವರ್ಧಕ ಗುಣ

The petals of the rose flower have cosmetic properties
Photo Credit : Freepik

ಗುಲಾಬಿ ಹೂವನ್ನು ಸಾಮಾನ್ಯವಾಗಿ ಎಲ್ಲಾ ಯುವತಿಯರು ಇಷ್ಟ ಪಡುತ್ತಾರೆ. ಪ್ರೀತಿಯ ಸಂಕೇತವಾಗಿರುವ ಈ ಗುಲಾಬಿ ಹೂ ಸೌಂದರ್ಯ ವರ್ಧಕ ಗುಣವನ್ನು ತನ್ನೊಳಗೆ ಇರಿಸಿಕೊಂಡಿದೆ. ಗುಲಾಬಿ ಹೂವಿನ ನೀರು (ರೋಸ್ ವಾಟರ್) ಮುಖದ ಹಲವಾರು ಸಮಸ್ಯೆಗಳಿಂದ ಹೊರಬರಲು ಮತ್ತು ಮುಖದ ಸೌಂದರ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಹಾಗೆಯೇ ಈ ಗುಲಾಬಿ ಹೂವಿನ ಫೇಸ್ ಪ್ಯಾಕ್ ಅನ್ನು ಮಾಡಬಹುದು. ಹೇಗೆ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ.

ಗುಲಾಬಿ ಹೂವಿನ ದಳಗಳನ್ನು ನೀರಿನಲ್ಲಿ ತೊಳೆದು ಅದನ್ನು ಸ್ವಲ್ಪ ಸಮಯ ಗುಲಾಬಿ ನೀರು (ರೋಸ್‌ ವಾಟರ್‌)ನಲ್ಲಿ ನೆನೆಹಾಕಿ ನಂತರ ಪೇಸ್ಟ್ ತಯಾರಿಸಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ. ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ ನಂತರ ಚೆನ್ನಾಗಿ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಹೀಗೆ ಕ್ರಮೇಣ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಗುಲಾಬಿ ದಳಗಳನ್ನು ಗ್ರೈನ್ ಮಾಡಿ ಪೇಸ್ಟ್‌ ಮಾಡಿಕೊಳ್ಳಿ. ನಂತರ ಅದಕ್ಕೆ ಕಡಲೆ ಹಿಟ್ಟು, ಹಸಿ ಹಾಲು ಸೇರಿಸಿ. ನಂತರ ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಸಮಯ ಹಾಗೆ ಬಿಟ್ಟು ನಂತರ ಶುದ್ಧ ನೀರಿನಿಂದ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ತ್ವಚೆ ಮೃದುವಾಗುತ್ತದೆ.

ಗುಲಾಬಿ ಹೂವಿನ ಎಸಳನ್ನು ನೀರಿನಲ್ಲಿ ನೆನೆಯಿಡಬೇಕು. ನಂತರ ಹೂವಿನ ಎಸಳನ್ನು ರುಬ್ಬಿಕೊಳ್ಳಿ. ತಯಾರಾದ ಪೇಸ್ಟ್ ಗೆ ಜೇನುತುಪ್ಪ, ಮೊಸರನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಮುಖಕ್ಕೆ ಅನ್ವಯಿಸಿ. ಹೀಗೆ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

ಗುಲಾಬಿ ದಳಗಳನ್ನು ಒಣಗಿಸಿ ಪುಡಿ ಮಾಡಿ ಅದಕ್ಕೆ ಅಲೋವೆರಾವನ್ನು ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಮುಖಕ್ಕೆ ಅನ್ವಯಿಸಿ. ಸ್ವಲ್ಪ ಸಮಯ ಹಾಗೆ ಒಣಗಲು ಬಿಡಿ. ನಂತರ ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ಮೊಡವೆ ಸಮಸ್ಯೆಯಿಂದ ಪಾರಾಗಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು