ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ಟಿಆರ್ಎಫ್/ಎಲ್ಇಟಿ ಉಗ್ರಗಾಮಿ ಸಂಘಟನೆಗಳ ಬೆಂಬಲಿತ ಇಬ್ಬರು ಹೈಬ್ರೀಡ್ ಉಗ್ರರನ್ನು ಶ್ರೀನಗರದಲ್ಲಿ ಸೋಮವಾರ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಉಗ್ರರ ಚಲನವಲನದ ಬಗ್ಗೆ ಖಚಿತ ಮಾಹಿತಿ ಆಧರಿಸಿ ಚೆಕ್ ಪೋಸ್ಟ್ ನಿರ್ಮಿಸಲಾಗಿತ್ತು. ಚೆಕ್ ಪೋಸ್ಟ್ ಬಳಿಗೆ ಬಂದ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದ್ದರು. ಅಧಿಕಾರಿಗಳ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದಾಗ ಅವರನ್ನು ಬೆನ್ನತ್ತಿದ್ದ ಜಂಟಿ ಕಾರ್ಯಾಚರಣೆ ಪಡೆ ಬಂಧನಕ್ಕೊಳಪಡಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶೋಧ ಕಾರ್ಯಾಚರಣೆ ವೇಳೆ ಬಂಧಿತ ಉಗ್ರರಿಂದ 15 ಪಿಸ್ತೂಲ್ಗಳು, 30 ಮ್ಯಾಗಜೀನ್ಗಳು, 300 ಸುತ್ತಿನ ಗುಂಡುಗಳು, ಒಂದು ಸೈಲೆನ್ಸರ್ ಸೇರಿದಂತೆ ಹಲವುಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಅವರು ಹೇಳಿದ್ದಾರೆ.