ಶ್ರೀನಗರ : ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬುಧವಾರ ಭದ್ರತಾ ಪಡೆಗಳ ಗುಂಡಿಗೆ ಹಿಜ್ಬುಲ್ ಮುಜಾಹಿದ್ದೀನ್ (ಎಚ್ಎಂ) ಉಗ್ರನೊಬ್ಬ ಹತ್ಯೆಯಾಗಿದ್ದಾನೆ.
ಉಮರ್ ಇಶ್ಫಾಕ್ ಮಲಿಕ್ ಹತ್ಯೆಯಾದ ಉಗ್ರ. ಖಚಿತ ಮಾಹಿತಿ ಮೇರೆಗೆ ಶೋಪಿಯಾನ್ ಜಿಲ್ಲೆಯ ನದಿಗಾಮ್ ಗ್ರಾಮದ ನವ್ಪೋರಾ ಪ್ರದೇಶದಲ್ಲಿ ಸೇನೆ ಹಾಗೂ ಸ್ಥಳೀಯ ಪೊಲೀಸರು ನಡೆಸಿದ ಜಂಟಿ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆಗಳ ಗುಂಡಿಗೆ ಉಗ್ರ ಬಲಿಯಾಗಿದ್ದಾನೆ.
ಹತ್ಯೆಯಾದ ಉಗ್ರ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದವನಾಗಿದ್ದು, ಈಚೆಗೆ ಶೋಪಿಯಾನ್ ಜಿಲ್ಲೆಯ ಅಹಿಂಸಾಪೋರಾ ಗ್ರಾಮದಲ್ಲಿ ನಡೆದ ಎಎಸ್ಐ ಮೇಲಿನ ದಾಳಿಯಲ್ಲಿ ಈತ ಪಾಲ್ಗೊಂಡಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.