ಕತ್ರಾ: ಜಮ್ಮುಕಾಶ್ಮೀರದ ಕತ್ರಾದ ಮಾತಾ ವೈಷ್ಣೂದೇವಿ ಭವನದಲ್ಲಿ ನಡೆದ ಕಾಲ್ತುಳಿತದಲ್ಲಿ 6 ಭಕ್ತರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.ಗಾಯಗೊಂಡವರನ್ನು ನರೈನಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕತ್ರಾದ ಮಾತಾ ವೈಷ್ಣನೋ ದೇವಿ ಭವನದಲ್ಲಿ ಇಂದು ಮುಂಜಾನೆ ಕಾಲ್ತುಳಿತ ಸಂಭವಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದು, ಘಟನೆಯಲ್ಲಿ 6 ಜನರು ಮೃತಪಟ್ಟಿದ್ದಾರೆ.
ಸಮುದಾಯ ಆರೋಗ್ಯ ಕೇಂದ್ರದ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ಗೋಪಾಲ್ ದತ್ ಅವರು ಕೆಲವು ಸಾವುನೋವುಗಳು ಸಹ ಸಂಭವಿಸಿವೆ ಆದರೆ ಸಂಖ್ಯೆ ಇನ್ನೂ ದೃಢಪಟ್ಟಿಲ್ಲ ಎಂದು ಹೇಳಿದರು. ಪೊಲೀಸರು ರಕ್ಷಣಾ ಕಾರ್ಯಾಚರಣೆ ಯನ್ನು ಪ್ರಾರಂಭಿಸಿದ್ದಾರೆ.