“ಕೋವಿಡ್ ನಮ್ಮ ಅಧ್ಯಯನಗಳ ಮೇಲೆ ಬಹಳ ಪರಿಮಾಮ ಬೀರಿದೆ. ಇಂತಹ ತರಬೇತಿ ಕಾರ್ಯಕ್ರಮಗಳು ಬಹಳಷ್ಟು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಿದೆ” ಎಂದು ವಿದ್ಯಾರ್ಥಿಯೊಬ್ಬರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
“ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ಭಾರತೀಯ ಸೇನೆಗೆ ತುಂಬಾ ಕೃತಜ್ಞನಾಗಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿದುಕೊಳ್ಳಲು ಒಳ್ಳೆಯ ಅವಕಾಶ ಸಿಗುತ್ತಿದೆ” ಎಂದು ಮತ್ತೊಬ್ಬ ವಿದ್ಯಾರ್ಥಿ ಹೇಳಿದ್ದಾರೆ.
“ಸ್ಪರ್ಧಾತ್ಮಕ ಪರೀಕ್ಷೆಗಳ ಪರಿಕಲ್ಪನೆ ಬಗ್ಗೆ ಪರಿಚಯಿಸುತ್ತಿರುವುದಕ್ಕೆ ಭಾರತೀಯ ಸೇನೆಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಮುಂದಿನ ದಿನಗಳಲ್ಲಿ ಪ್ರತಿ ವಿದ್ಯಾರ್ಥಿಗಳ ಆದ್ಯತೆ ಸ್ಪರ್ಧಾತ್ಮಕ ಪರೀಕ್ಷೆಗಳೇ ಆಗಿರಲಿವೆ. ಈಗ ಕೇಲವ ಆನ್ ಲೈನ್ ಕ್ಲಾಸ್, ಆನ್ ಲೈನ್ ಪರೀಕ್ಷೆಗಳನ್ನು ಎದುರಿಸುತ್ತಿರುವ ನಮಗೆ ಈ ಭೌತಿಕ ತರಬೇತಿ ತರಗತಿ ಬದಲಾವಣೆಯನ್ನು ತರಲಿದೆ” ಎಂದು ಅಫಿಯಾ ಹನೀಫ್ (ವಿದ್ಯಾರ್ಥಿ) ಹೇಳಿದ್ದಾರೆ.