News Karnataka Kannada
Tuesday, April 30 2024
ದೇಶ

ಇಂಡಿಯಾ ಹೆಸರು ಬದಲಾವಣೆ, ವಿಶ್ವ ಸಂಸ್ಥೆ ಕಾರ್ಯದರ್ಶಿ ಹೇಳಿದ್ದೇನು?

The United Nations will change India's name to India
Photo Credit : News Kannada

ನವದೆಹಲಿ: ಇಂಡಿಯಾವು ತನ್ನ ದಾಖಲೆಗಳಲ್ಲಿ ದೇಶದ ಹೆಸರನ್ನು ಭಾರತ ಎಂದು ಬದಲಾಯಿಸಿದರೆ ವಿಶ್ವಸಂಸ್ಥೆಯು ಕೂಡ ತನ್ನ ದಾಖಲೆಗಳಲ್ಲಿ ಇಂಡಿಯಾದ ಹೆಸರನ್ನು ಭಾರತ್ ಎಂದು ಬದಲಾಯಿಸಲಿದೆ. ಅದಕ್ಕೆ ನಮ್ಮ ಕಡೆಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಮುಖ್ಯ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.

ಒಂದು ವೇಳೆ ಹೆಸರು ಬದಲಾವಣೆಯಾದರೆ ಹೆಸರು ಬದಲಾವಣೆ ಮಾಡಿದ ಮೊದಲ ದೇಶ ಭಾರತವಾಗುವುದಿಲ್ಲ. ರಾಜಕೀಯ, ಸಾಮಾಜಿಕ ಅಥವಾ ಇತರ ಕಾರಣಗಳಿಗೆ ರಾಷ್ಟ್ರದ ಹೆಸರನ್ನು ಬದಲಾಯಿಸಿದ ದೇಶಗಳ ದೊಡ್ಡ ಪಟ್ಟಿ ಇದೆ ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷ ಟರ್ಕಿ ತನ್ನ ಹೆಸರನ್ನು ಟರ್ಕಿಯೆ ಎಂದು ಬದಲಾಯಿಸಿದ ಉದಾಹರಣೆಯನ್ನು ಡುಜಾರಿಕ್‌ ಉಲ್ಲೇಖಿಸಿದ್ದು, ಇಂತಹ ಹಲವು ಘಟನೆಗಳು ನಡೆದಿದೆ ಎಂದು ಹೇಳಿದ್ದಾರೆ.

ಭಾರತ ರಾಜಕೀಯವಾಗಿ ಮತ್ತು ಭೌಗೋಳಿಕವಾಗಿ ಭಾರತ ಪ್ರಪಂಚದ ದೇಶಗಳ ಸಂಪರ್ಕ ಸೇತುವಾಗಿ ಕೆಲಸ ಮಾಡುತ್ತಿದೆ. ಈ ಬಾರಿಯ G20 ಸಮಾವೇಶದ ವಸುಧೈವ ಕುಟುಂಬಕಂ ಧ್ಯೇಯ ಎಲ್ಲ ದೇಶಗಳಿಗೂ ಅಗತ್ಯವಾದ ವಿಚಾರವಾಗಿದೆ ಎಂದು ಡುಜಾರಿಕ್ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು