News Karnataka Kannada
Tuesday, April 30 2024
ದೇಶ

‘ಇಂಡಿಯಾ ಅನ್ನೋದಕ್ಕೆ ಅರ್ಥವಿಲ್ಲ, ನಾವು. . . .’: ಖಡಕ್ ರಿಯಾಕ್ಷನ್ ಕೊಟ್ಟ ಖ್ಯಾತ ನಟಿ

Kangan
Photo Credit : News Kannada

ದೆಹಲಿ: ಇಂಡಿಯಾ ಹೆಸರನ್ನು ‘ಭಾರತ’ ಎಂದು ಬದಲಾಯಿಸಲಾಗುವುದು ಎನ್ನುವ ಸುದ್ದಿ ಹರಿದಾಡಿದೆ. ದೇಶದ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನವು ವಿಚಾರಕ್ಕೆ ಕುರಿತಂತೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ನಟಿ ಕಂಗನಾ ರಣಾವತ್ ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ಇಂಡಿಯಾ ಅನ್ನೋದಕ್ಕೆ ಅರ್ಥವಿಲ್ಲ, ನಾವು ಭಾರತೀಯರು’ ಎಂದು ಅವರು ಹೆಸರು ಬದಲಾವಣೆ ವಿಚಾರವನ್ನು ಬೆಂಬಲಿಸಿದ್ದಾರೆ. ಅವರ ಹೇಳಿಕೆ ಸದ್ಯ ವೈರಲ್ ಆಗುತ್ತಿದೆ.

‘ಈ ಹೆಸರಿನಲ್ಲಿ (ಇಂಡಿಯಾ) ಪ್ರೀತಿಸಲು ಏನಿದೆ? ಮೊದಲನೆಯದಾಗಿ ಅವರಿಗೆ (ಬ್ರಿಟಿಷರಿಗೆ) ಸಿಂಧು ಎಂಬುದನ್ನು ಉಚ್ಚರಿಸಲು ಬರುತ್ತಿರಲಿಲ್ಲ. ಹೀಗಾಗಿ, ಇಂಡಸ್ ಎಂದು ಕರೆದರು. ಆ ಬಳಿಕ ಕೆಲವರು ಹಿಂದೋಸ್ ಎಂದರೆ, ಇನ್ನೂ ಕೆಲವರು ಇಂಡೋಸ್ ಎಂದರು.

ಕೊನೆಗೆ ಇಂಡಿಯಾ ಎಂದು ಮಾಡಿದರು. ಕುರುಕ್ಷೇತ್ರದ ಮಹಾಯುದ್ಧದಲ್ಲಿ ಭಾಗವಹಿಸಿದ ಎಲ್ಲಾ ರಾಜ್ಯಗಳು ಭಾರತ ಎಂಬ ಒಂದು ಖಂಡದ ಅಡಿಯಲ್ಲಿ ಬಂದವು. ಆದರೆ ಅವರು (ಬ್ರಿಟಿಷರು) ನಮ್ಮನ್ನು ಇಂದೂ, ಸಿಂಧು ಎಂದು ಕರೆದಿದ್ದು ಏಕೆ’ ಎಂಬುದಾಗಿ ಕಂಗನಾ ಪ್ರಶ್ನೆ ಮಾಡಿದ್ದಾರೆ.

‘ಭಾರತ ಎಂಬ ಹೆಸರು ಎಷ್ಟು ಅರ್ಥಪೂರ್ಣವಾಗಿದೆ. ಆದರೆ ಇಂಡಿಯಾ ಎಂಬುದರ ಅರ್ಥವೇನು? ನಮ್ಮನ್ನು ರೆಡ್ ಇಂಡಿಯನ್ಸ್ ಎಂದು ಕರೆಯುತ್ತಿದ್ದರು.  ಇದು ನಮ್ಮ ಹೆಸರಲ್ಲ ನಾವು ಇಂಡಿಯನ್ಸ್ ಅಲ್ಲ ಭಾರತೀಯರು’ ಎಂದು ಹೇಳಿದ್ದಾರೆ ಕಂಗನಾ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು