News Karnataka Kannada
Wednesday, May 08 2024
ದೇಶ

ಇಸ್ರೇಲ್‌ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಮತ

Ind Isr
Photo Credit : News Kannada

ನವದೆಹಲಿ: ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್‌ ವಾಸ ನೆಲೆಗಳನ್ನು ಸ್ಥಾಪಿಸುವುದನ್ನು ಅಕ್ರಮ ಎಂದು ಸಾರುವ ನಿರ್ಣಯವನ್ನು ಬೆಂಬಲಿಸಿ ವಿಶ್ವಸಂಸ್ಥೆಯಲ್ಲಿ ಭಾರತ ಮತ ಹಾಕಿರುವುದು ರಾಜತಾಂತ್ರಿಕ ವಲಯದಲ್ಲಿ ಭಾರಿ ಅಚ್ಚರಿಗೆ ಕಾರಣವಾಗಿದೆ.

ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಭೂಭಾಗ ಹಾಗೂ ಆಕ್ರಮಿತ ಸಿರಿಯನ್‌ ಗೋಲನ್‌ನಲ್ಲಿ ಇಸ್ರೇಲ್‌ನ ವಸಾಹತು ಸ್ಥಾಪನೆ’ ಖಂಡಿಸುವ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಲಾಗಿತ್ತು. ಭಾರತ ಸೇರಿ 145 ದೇಶಗಳು ನಿರ್ಣಯದ ಪರ ಮತ ಚಲಾವಣೆ ಮಾಡಿದವು. ಅಮೆರಿಕ, ಕೆನಡಾ, ಇಸ್ರೇಲ್‌ ಸೇರಿ 7 ದೇಶಗಳು ವಿರುದ್ಧ ಮತ ಹಾಕಿದರೆ, 18 ದೇಶಗಳು ತಟಸ್ಥವಾಗಿ ಉಳಿದವು. ಹೀಗಾಗಿ ನಿರ್ಣಯ ಅಂಗೀಕಾರವಾಯಿತು.

ಪ್ಯಾಲೆಸ್ತೀನ್‌ ಭೂಭಾಗದಲ್ಲಿ ಜಾಗ ಕಸಿಯುವುದು, ಸಂರಕ್ಷಿತ ಜನರ ಜೀವನೋಪಾಯಗಳನ್ನು ಅಸ್ತವ್ಯಸ್ತಗೊಳಿಸುವುದು, ಬಲವಂತವಾಗಿ ನಾಗರಿಕರನ್ನು ಸ್ಥಳಾಂತರಿಸುವುದು, ಜಾಗವನ್ನು ಕಬಳಿಸುವುದನ್ನು ಖಂಡಿಸುವ ಅಂಶ ನಿರ್ಣಯದಲ್ಲಿದೆ.

ಇನ್ನು . ಯುದ್ಧ ನಿಲ್ಲಿಸುವ ಪರ ಆ ನಿರ್ಣಯ ಇದ್ದ ಕಾರಣ ಭಾರತ ಮತದಾನ ಪ್ರಕ್ರಿಯೆಯಿಂದಲೇ ದೂರ ಉಳಿದಿತ್ತು. ಆದರೆ ಈಗ ಪ್ಯಾಲೆಸ್ತೀನ್‌ ಭೂಭಾಗದಲ್ಲಿ ಇಸ್ರೇಲ್‌ ವಸಾಹತು ಸ್ಥಾಪನೆ ಖಂಡಿಸುವ ನಿರ್ಣಯದ ಪರ ಮತ ಚಲಾವಣೆ ಮಾಡಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು