ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದಲ್ಲಿ ಶೇ.100ರಷ್ಟು ಮಂದಿಗೆ ಕೋವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, ಹಿಮಾಚಲ ಪ್ರದೇಶ ಕೊರೋನಾ ಹೋರಾಟದಲ್ಲಿ ಚಾಂಪಿಯನ್ ಆಗಿದೆ ಎಂದು ಪ್ರಧಾನಿ ಮೋದಿ ಹೊಗಳಿದ್ದಾರೆ. ಸೋಮವಾರ ಹಿಮಾಚಲ ಪ್ರದೇಶದ ಕೋವಿಡ್ ಲಸಿಕೆ ಫಲಾನುಭವಿಗಳು ಮತ್ತು ರಾಜ್ಯದ ಆರೋಗ್ಯ ಕಾರ್ಯಕರ್ತರೊಂದಿಗೆ ವರ್ಚುಯಲ್ ಸಂವಾದ ನಡೆಸಿ ಮಾತನಾಡಿದ್ದಾರೆ.
ಶೇ.100ರಷ್ಟು ಮಂದಿಗೆ ಮೊದಲನೆ ಡೋಸ್ ನೀಡಿರುವ ಹಿಮಾಚಲ ಪ್ರದೇಶದ ಸಾಧನೆ ಶ್ಲಾಘಿಸುತ್ತೇನೆ ಎಂದಿದ್ದಾರೆ. ತದನಂತರ ಹಿಮಾಚಲ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಮಾತನಾಡಿ, ನವೆಂಬರ್ 30ರೊಳಗೆ ಎರಡನೇ ಡೋಸ್ ಲಸಿಕೆ ನೀಡುತ್ತೇವೆ ಎಂದು ಹೇಳಿದ್ದಾರೆ. ಫಲಾನುಭವಿಯೊಬ್ಬರ ಬಳಿ ಪ್ರಧಾನಿ ಮೋದಿ ಮಾತನಾಡಿದ್ದು, ಎಲ್ಲರೂ ತಪ್ಪದೆ ಎರಡು ಡೋಸ್ ಲಸಿಕೆ ಹಾಕಿಸಿ ಎಂದು ಹೇಳಿದ್ದಾರೆ.