ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮಂಗಳವಾರ ರಿಕ್ಟರ್ ಮಾಪಕದಲ್ಲಿ 2.3 ತೀವ್ರತೆಯ ಭೂಕಂಪ ಸಂಭವಿಸಿದೆ.ಭೂಕಂಪದ ಕೇಂದ್ರಬಿಂದು ಕುಲುವಿನಲ್ಲಿ 10 ಕಿಲೋಮೀಟರ್ ಆಳದಲ್ಲಿದೆ.ಭೂಕಂಪನವು ಬೆಳಿಗ್ಗೆ 11.07 ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಹಿಮಾಚಲ ಪ್ರದೇಶದ ಜನರು ಈ ತಿಂಗಳಲ್ಲಿ ಭೂಕಂಪನ ಅನುಭವಿಸಿದ್ದು ಇದು ಮೂರನೇ ಬಾರಿ. ಆದರೆ, ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.ಸೋಮವಾರ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ರಿಕ್ಟರ್ ಮಾಪಕದಲ್ಲಿ 2.8 ತೀವ್ರತೆಯ ಭೂಕಂಪ ಸಂಭವಿಸಿದೆ. ಡಿ.22ರಂದು ಇದೇ ಜಿಲ್ಲೆಯಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಹಿಮಾಚಲ ಪ್ರದೇಶದ ಹೆಚ್ಚಿನ ಭಾಗಗಳು ಅತ್ಯಂತ ಸೂಕ್ಷ್ಮವಾದ ಭೂಕಂಪನ ವಲಯದಲ್ಲಿ ಬರುತ್ತವೆ ಮತ್ತು ರಾಜ್ಯವು ಪ್ರತಿ ಬಾರಿಯೂ ಲಘು ಭೂಕಂಪಗಳನ್ನು ಅನುಭವಿಸುತ್ತದೆ.ಕಳೆದ ತಿಂಗಳು ರಾಜ್ಯದ ಕಿನ್ನೌರ್ ಜಿಲ್ಲೆಯಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು.
ಹಿಮಾಲಯ ಪ್ರದೇಶವು 4 ಏಪ್ರಿಲ್, 1905 ರಂದು ಇಲ್ಲಿಯವರೆಗಿನ ಅತಿದೊಡ್ಡ ಭೂಕಂಪವನ್ನು ಎದುರಿಸಿತು. 20,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು ಮತ್ತು 7.8 ತೀವ್ರತೆಯ ಭೂಕಂಪವು ಸಂಪೂರ್ಣ ಕಂಗ್ರಾ ಕಣಿವೆಯಲ್ಲಿ ಸಂಭವಿಸಿದ ನಂತರ ಹಲವಾರು ಕಟ್ಟಡಗಳು ನಾಶವಾದವು.