ಭೋಪಾಲ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಲಕ್ಷಾಂತರ ರೂಪಾಯಿ ಮೌಲ್ಯದ ಸೂಟ್ ಗಳು, ಉಡುಪುಗಳನ್ನು ಧರಿಸುತ್ತಾರೆ.
ಆದರೆ ನಾನು ಕೇವಲ ಈ ಬಿಳಿ ಟಿ-ಶರ್ಟ್ ನ್ನು ಧರಿಸುತ್ತೇನೆ ಎಂದು ಹೇಳಿದ್ದಾರೆ. ಸತ್ನಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾನು ಪ್ರಧಾನಿ ಮೋದಿ ಅವರ ಭಾಷಣ ಕೇಳಿದೆ. ಅವರು ಪ್ರತಿ ಭಾಷಣದಲ್ಲೂ ನಾನು ಒಬಿಸಿ ಸಮುದಾಯಕ್ಕೆ ಸೇರಿದವನು ಎಂದು ಹೇಳುತ್ತಿದ್ದರು. ಇದನ್ನೇ ಪದೇ ಪದೇ ಹೇಳುವ ಮೂಲಕ ಅವರು ಪ್ರಧಾನಿಯೂ ಆದರು.
ಆದರೆ ಅವರು ದಿನಕ್ಕೆ ಕನಿಷ್ಠ 2 ಬಾರಿಯಾದರೂ ಲಕ್ಷಾಂತರ ರೂಪಾಯಿ ಮೌಲ್ಯದ ಸೂಟ್ ಧರಿಸುತ್ತಾರೆ. ಪ್ರಧಾನಿ ಮೋದಿ ಒಂದೇ ಬಟ್ಟೆಯನ್ನು ಪುನರಾವರ್ತಿಸಿರುವುದನ್ನು ನೀವು ಗಮನಿಸಿದ್ದೀರಾ? ನಾನು ಇದೊಂದು ಬಿಳಿ ಶರ್ಟ್ ಧರಿಸುತ್ತೇನೆ. ನಾನು ಜಾತಿ ಗಣತಿ ಬಗ್ಗೆ ಮಾತನಾಡಲು ಆರಂಭಿಸಿದ ಬೆನ್ನಲ್ಲೇ ಮೋದಿ ಅವರ ಭಾಷಣದಲ್ಲಿ ಜಾತಿ ಮಾಯವಾಗಿದೆ.
ಈಗ ಪ್ರಧಾನಿ ಮೋದಿ ದೇಶದಲ್ಲಿ ಜಾತಿಯತೆ ಎಂಬುದು ಇಲ್ಲ ಎಂದು ಹೇಳಲು ಪ್ರಾರಂಭಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.