News Karnataka Kannada
Wednesday, May 08 2024
ಹರ್ಯಾಣ

7ನೇ ಮಹಡಿಯಿಂದ ಜಿಗಿದು ಯೂಟ್ಯೂಬರ್‌ ಜೋಡಿ ಆತ್ಮಹತ್ಯೆ : ಕಾರಣ ಇಲ್ಲಿದೆ

ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಯೂಟ್ಯೂಬರ್‌ ಜೋಡಿಯೊಂದು ಕಟ್ಟಡದ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಬಹದ್ದೂರ್‌ಗಢದಲ್ಲಿ ನಡೆದಿದೆ. ಗಾರ್ವಿತ್‌ (25) ಮತ್ತು ನಂದಿನಿ (22) ಮೃತ ದುರ್ದೈವಿಗಳು.
Photo Credit : NewsKarnataka

ಚಂಡೀಗಢ:  ಲೀವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಯೂಟ್ಯೂಬರ್‌ ಜೋಡಿಯೊಂದು ಕಟ್ಟಡದ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಬಹದ್ದೂರ್‌ಗಢದಲ್ಲಿ ನಡೆದಿದೆ. ಗಾರ್ವಿತ್‌ (25) ಮತ್ತು ನಂದಿನಿ (22) ಮೃತ ದುರ್ದೈವಿಗಳು.

ಗರ್ವಿತ್ ಮತ್ತು ನಂದಿನಿ ಇಬ್ಬರೂ ಯೂಟ್ಯೂಬ್‌ ಕಂಟೆಂಟ್‌ ಕ್ರಿಯೇಟರ್ಸ್‌ ಆಗಿದ್ದರು. ತಮ್ಮದೇ ಚಾನಲ್‌ ನಡೆಸುತ್ತಿದ್ದ ಈ ಜೋಡಿ ಯೂಟ್ಯೂಬ್‌ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ಫ್ಲಾಟ್‌ಫಾರ್ಮ್‌ಗಳಿಗಾಗಿ ಕಿರುಚಿತ್ರ ತಯಾರಿಸುತ್ತಿತ್ತು ಎಂದು ಮೂಲಗಳು ತಿಳಿಸಿವೆ.

“ಕೆಲವು ದಿನಗಳ ಹಿಂದೆ ಇವರು ತಮ್ಮ ತಂಡದೊಂದಿಗೆ ಡೆಹ್ರಾಡೂನ್‌ನಿಂದ ಬಹದ್ದೂರ್‌ಗಢಕ್ಕೆ ಸ್ಥಳಾಂತರಗೊಂಡಿದ್ದರು. ಅವರು ಬಹು ಮಹಡಿ ಕಟ್ಟಡವೊಂದರ ಏಳನೇ ಮಹಡಿಯಲ್ಲಿನ ಫ್ಲಾಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಅಲ್ಲಿ ಅವರು ತಮ್ಮ ಐದು ಸಹೋದ್ಯೋಗಿಗಳೊಂದಿಗೆ ವಾಸಿಸುತ್ತಿದ್ದರುʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಸಂಜೆ 6 ಗಂಟೆಗೆ ಚೀತ್ರೀಕರಣ ಮುಗಿಸಿ ಹಿಂತಿರುಗಿದ ಜೋಡಿ ನಡುವೆ ಯಾವುದೋ ವಿಚಾರ ಕುರಿತು ವಾಗ್ವಾದ ನಡೆದಿದೆ ಬಳಿಕಬಳಿಕ ಇಬ್ಬರೂ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆʼʼ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್‌ ಅಧಿಕಾರಿಗಳು ಮೃತದೇಹಗಳನ್ನು ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಫೋರೆನಿಕ್‌ ತಂಡ ಕೂಡ ಸ್ಥಳಕ್ಕೆ ತೆರಳಿ, ಸಾಕ್ಷ್ಯ ಮತ್ತು ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಸಂಗ್ರಹಿಸಿದೆ.ʼʼನಾವು ಘಟನೆಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಎಲ್ಲ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ. ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರಕರಣದ ತನಿಖಾಧಿಕಾರಿ ಜಗ್ಬೀರ್ ಹೇಳಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು