ಚಿತ್ರದುರ್ಗಾ: ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಪತ್ನಿ ಪತಿಯಾ ಸಾಲದಿಂದಾಗಿ ಸಾಲಗಾರರ ಕಿರುಕುಳ ತಾಳಲಾರದೆ ನೇಣಿಗೆ ಶರಣಾಗಿದ್ದಾಳೆ.ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ. ರಂಜಿತಾ (23) ಮೃತ ದುರ್ದೈವಿ.
ಹೌದು.. ಮೃತ ರಂಜಿತಾ ಮನೆಯವರು ಅಳಿಯಾ ಸರ್ಕಾರಿ ನೌಕರಿಯಲ್ಲಿದ್ದಾನೆ ಮಗಳು ಸುಖವಾಗಿ ಇರುತ್ತಾಳೆ ಎಂದು ಇತ್ತೀಚೆಗಷ್ಟೆ ವಿವಾಹ ಮಾಡಿಕೊಟ್ಟಿದ್ದರು ಆದರೆ ಗಂಡ ಮಾತ್ರ ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ಸಿಲುಕಿ ಕೊಟ್ಯಾಂತರ ಸಾಲ ಮಾಡಿದ್ದ ಇದರಿಂದ ಆಗಾಗ ಸಾಲಗಾರರು ಮನೆಗೆ ಬಂದು ಸಾಲ ಹಿಂತಿರುಗಿಸುವಂತೆ ಇಬ್ಬರನ್ನು ಪೀಡಿಸುತ್ತಿದ್ದರು ಇದರಿಂದ ಬೇಸತ್ತ ಪತ್ನಿ ನೇಣಿಗೆ ಶರಣಾಗಿದ್ದಾಳೆ.