ಭಿವಾನಿ: ಗುಂಡು ಹಾರಿಸಲು ಬಂದ ದುಷ್ಕರ್ಮಿಗಳನ್ನು ಮಹಿಳೆಯೊಬ್ಬರು ಪೊರಕೆ ಹಿಡಿದು ಓಡಿಸಿರುವ ವಿಡಿಯೋವೊಂದು ವೈರಲ್ ಆಗಿದೆ. ಹರಿಯಾಣದಲ್ಲಿ ಭಿವಾನಿಯಲ್ಲಿ ಈ ಘಟನೆ ನಡೆದಿದೆ. ಗುಂಡಿನ ದಾಳಿಯ ಸಮಯದಲ್ಲಿ, ಹೊರಗೆ ನಿಂತಿದ್ದ ವ್ಯಕ್ತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ಮನೆಯ ಹೊರಗಡೆ ಏನೋ ಶಬ್ದವಾಗುತ್ತಿರುವುದನ್ನು ಕಂಡ ಮಹಿಳೆ ಪೊರಕೆಯನ್ನೇ ಆಯುಧವಾಗಿ ಹಿಡಿದುಕೊಂಡು ಬಂದು, ಧೈರ್ಯದಿಂದ ನಾಲ್ವರು ದುಷ್ಕರ್ಮಿಗಳನ್ನು ಅಲ್ಲಿಂದ ಹೆದರಿ ಓಡಿ ಹೋಗುವಂತೆ ಮಾಡಿದ್ದಾಳೆ. ಈ ಫಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಿಸಿಟಿವಿ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ನಿನ್ನೆ(ನವೆಂಬರ್ 27) ಬೆಳಗ್ಗೆ 7:30ರ ಸುಮಾರಿಗೆ ಭಿವಾನಿಯ ಡಾಬರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವಂತೆ, ದಾಳಿಕೋರರು ಹರಿಕಿಶನ್ ಎಂಬಾತನ ಮೇಲೆ ಒಂಬತ್ತು ಭಾರೀ ಗುಂಡು ಹಾರಿಸಿದ್ದು ಕಂಡು ಬಂದಿದೆ. ಸದ್ಯ ಹರಿಕಿಶನ್ಗೆ ಅಲ್ಲಲ್ಲಿ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Four to five miscreants riding on two bikes opened fire on a person standing outside his house in Bhiwani district of Haryana. pic.twitter.com/fzizPgQ57z
— Nikhil Choudhary (@NikhilCh_) November 27, 2023