ಹರಿಯಾಣ: ಹರಿಯಾಣದಲ್ಲಿ ಯುವಕನೊಬ್ಬ ಮೊಬೈಲ್ ಚಾರ್ಜ್ ಮಾಡಿ, ತನ್ನ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡಿದ್ದ ಸ್ವಲ್ಪ ಸಮಯದಲ್ಲೇ ಸ್ಫೋಟಗೊಂಡ ಪರಿಣಾಮ ಕಾಲಿಗೆಗಾಯ ಆಗಿರುವ ಘಟನೆ ನಡೆದಿದೆ.
ಯುವಕನನ್ನು ಕುಟುಂಬದವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬುಧವಾರ ಫೋನ್ನ ಬ್ಯಾಟರಿ ಖಾಲಿಯಾದ ಕಾರಣ ಮೊಬೈಲ್ ಚಾರ್ಜಿಂಗ್ಗೆ ಹಾಕಿದ್ದರು. ಚಾರ್ಜ್ ಮಾಡಿದ ನಂತರ, ಅವನು ಅದನ್ನು ಮನೆಯಲ್ಲಿ ಬಳಸಲು ಪ್ರಾರಂಭಿಸಿದ್ದ ಎನ್ನಲಾಗಿದೆ.
ಫೋನ್ ಅನ್ನು ಪ್ಯಾಂಟ್ನ ಜೇಬಿಗೆ ಹಾಕಿಕೊಂಡ ಸ್ವಲ್ಪ ಸಮಯದ ನಂತರ ಫೋನ್ ಸ್ಫೋಟಗೊಂಡು ಅವನ ಕಾಲು ಸುಟ್ಟುಹೋಗಿದೆ. ಬಳಿಕ ಮನೆಯವರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಚಿಕಿತ್ಸೆ ಬಳಿಕ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.