News Karnataka Kannada
Sunday, April 28 2024
ಹರ್ಯಾಣ

ಮುಸ್ಲಿಂ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಕೊಂದ ಯುವಕರು

Death 20072021
Photo Credit :

ಗುರುಗಾಂವ್ : ಮುಸ್ಲಿಂ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಮೂವರು ಹೊಡೆದು ಕೊಂದಿರುವ ಘಟನೆ ಪಲ್ವಾಲ್ ಎಂಬಲ್ಲಿ ನಡೆದಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮೃತನನ್ನು ರಾಹುಲ್ ಖಾನ್ ಎಂದು ಗುರುತಿಸಲಾಗಿದೆ. ಆರೋಪಿಗಳಾದ ಆಕಾಶ್ ಅಲಿಯಾಸ್ ದಿಲ್ವಾಜೆ, ವಿಶಾಲ್, ಕಲುವಾ ಎಂಬುವರನ್ನು ಬಂಧನಕ್ಕೊಳಪಡಿಸಲಾಗಿದೆ.

ಕುಡಿದ ಮತ್ತಿನಲ್ಲಿದ್ದ ಮೂವರು ಕೋಲಿನಿಂದ ಮುಖಕ್ಕೆ ಹೊಡೆಯುತ್ತಾ ನಾವು ಹಿಂದುಗಳು, ನೀನು ಮುಸ್ಲಿಂ ಎಂದು ಹೇಳುತ್ತಾ ಮನಬಂದಂತೆ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. 31 ಸೆಕೆಂಡ್‍ಗಳ ವಿಡಿಯೋದಲ್ಲಿ ರಾಹುಲ್ ಖಾನ್ ಬಟ್ಟೆ ಮುಖ ರಕ್ತಸಿಕ್ತವಾಗಿ ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವುದು ಕಾಣಿಸುತ್ತದೆ.

ಇಲ್ಲಿಯವರೆಗೆ ಮೃತ ಯುವಕನ ಕುಟುಂಬವು ಕೋಮುವಾದ ಸಂಬಂಧದ ದೂರು ದಾಖಲಿಸಿಲ್ಲ. ತನಿಖೆಗೂ ಕೂಡ ಬಂದಿಲ್ಲ. ದೊರೆತ ಸಿಡಿಯಲ್ಲಿ ಆತನಿಗೆ ಥಳಿಸಿದ ವ್ಯಕ್ತಿಯು ಆತ ಸತ್ತು ಹೋದ ಎಂದು ಹೇಳುವುದು ಕೇಳುತ್ತದೆ. ನಾವು ಅದನ್ನು ಫೊರೋನ್ಸಿಕ್ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಡಿಎಸ್ಪಿ(ನಗರ) ಪಲ್ವಾಲ್ ಯಶ್ಪಾಲ್ ಖತಾನಾ ಅವರು ಹೇಳಿದ್ದಾರೆ.

ಏನಿದು ಘಟನೆ?
ಮೃತ ಯುವಕ ಮತ್ತು ಆತನ ಸ್ನೇಹಿತರು ಹೋಶಂಗಾಬಾದ್‍ನಲ್ಲಿ ಮದುವೆಗೆ ಹೋಗಿದ್ದರು. ಅಲ್ಲಿಂದ ರಸುಲ್ಪುರ ಗ್ರಾಮಕ್ಕೆ ಮರಳಿದ ಅವರು ಜಗಳ ಶುರು ಮಾಡಿದ್ದಾರೆ. ಮೂವರು ಸ್ನೇಹಿತರು ಮದ್ಯ ಸೇವಿಸುತ್ತಿದ್ದಾಗ ಕಲುವಾ ಎಂಬಾತನ ಮೊಬೈಲ್ ಅನ್ನು ಮೃತ ರಾಹುಲ್ ಖಾನ್ ಬಚ್ಚಿಟ್ಟಿದ್ದಾರೆ. ನಂತರ ಕಲುವಾ ಫೋನ್ ಅನ್ನು ಹುಡುಕಾಡಿದ್ದಾನೆ. ನಂತರ ಕಲುವಾ ರಾಹುಲ್ ಖಾನ್ ಫೋನ್ ಬಚ್ಚಿಟ್ಟಿದ್ದಾನೆ ಎಂಬ ಕಾರಣಕ್ಕೆ ವಾಗ್ವಾದ ಶುರು ಮಾಡಿದ್ದಾರೆ. ನಂತರ ಆ ಮೂವರು ಕೋಪದ ಭರದಲ್ಲಿ ರಾಹುಲ್ ಖಾನ್‍ಗೆ ಹೊಡೆಯಲು ಶುರು ಮಾಡಿದ್ದಾರೆ. ನಂತರ ಅಲ್ಲಿ ಹತ್ತಿರ ಇದ್ದ ಕಾಲುವೆಗೆ ಕರೆದೊಯ್ದು ಅಲ್ಲಿದ್ದ ರಾಡ್, ಕೋಲುಗಳಿಂದ ಹೊಡೆದಿದ್ದಾರೆ. ಈ ವಿಡಿಯೊವನ್ನು ಆಕಾಶ್ ಎಂಬಾತ ಚಿತ್ರೀಕರಿಸಿದ್ದಾನೆ. ಆತ ಅಲ್ಲೇ ಸಾವನ್ನಪ್ಪಿದ್ದಾನೆ. ಈ ಆಪಾದನೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾಹುಲ್ ಕುಟುಂಬಕ್ಕೆ ಕರೆ ಮಾಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಕರೆ ಮಾಡಿ ತಿಳಿಸಿದ್ದಾರೆ.

ಆರಂಭದಲ್ಲಿ, ನಂಗಲ್ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ರಾಹುಲ್ ಮೋಟಾರ್‍ ಸೈಕಲ್‍ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಕುಟುಂಬವು ಚಂದುತ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಯಿತು ಎಂದು ತಂದೆ ಚಿಡ್ಡಿ ಖಾನ್ ಹೇಳಿದ್ದಾರೆ.

‘ಬೆಳಗ್ಗೆ 10 ಗಂಟೆಗೆ ಅವನ ಸ್ನೇಹಿತ ಕಲುವಾ ಸರೈ ಖತೇಲಾ ಹಳ್ಳಿಯಲ್ಲಿರುವ ನಮ್ಮ ಮನೆಗೆ ಬಂದು ಮದುವೆಗೆ ಹಾಜರಾಗಲು ಮೋಟಾರ್ ಸೈಕಲ್‍ನಲ್ಲಿ ಹೋದರು. ಸಂಜೆ 6 ಗಂಟೆಗೆ, ರಸುಲ್‍ಪುರ ಗ್ರಾಮದಲ್ಲಿ ನಡೆದ ಅಪಘಾತದಲ್ಲಿ ನನ್ನ ಮಗ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ಆತನ ಸ್ನೇಹಿತರಿಂದ ನಮಗೆ ಕರೆ ಬಂದಿತು ಎಂದಿದ್ದಾರೆ.

ರಾಹುಲ್ ಖಾನ್ ಸೋದರ ಮಾವ ಅಕ್ರಂ ಖಾನ್, ರಾಹುಲ್ ಅವರನ್ನು ಕರೆದೊಯ್ದಿದ್ದ ಕಾಲುವಾ ಮನೆಗೆ ತಲುಪಿದಾಗ ಪ್ರಜ್ಞೆ ಇರಲಿಲ್ಲ. ಅವನ ತಲೆಗೆ ಬಲವಾದ ಏಟು ಬಿದ್ದಿತ್ತು ಮತ್ತು ಅವನ ಕೈ, ಕಾಲುಗಳ ಮೇಲೆ ಗಾಯಗಳಿದ್ದವು. ಆತನನ್ನು ತಕ್ಷಣ ನಮಬಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದನು. ಚಿಕಿತ್ಸೆ ಸಮಯದಲ್ಲಿ, ತನಗೆ ಹೊಡೆದಿರುವುದನ್ನು ಸಹೋದರಿ ಬಳಿ ಹೇಳಿಕೊಂಡಿದ್ದಾನೆ, ಆದರೆ ಆ ಸಮಯದಲ್ಲಿ ನಾವು ಯಾರ ಮೇಲೂ ಅನುಮಾನ ಪಡಲಿಲ್ಲ ಎಂದು ಹೇಳಿದರು. ಡಿಸೆಂಬರ್ 15ರಂದು ಬೆಳಗ್ಗೆ ವೈರಲ್ ವೀಡಿಯೊ ನೋಡಿ ಕೊಲೆಯ ದೂರು ದಾಖಲಿಸಿದ್ದೇವೆ ಎಂದು ಅಕ್ರಮ್ ತಿಳಿಸಿದ್ದಾರೆ.

ಕೆಲವು ಫೋಟೋಗಳು ಮತ್ತು ವೀಡಿಯೊಗಳನ್ನು ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಲಾಗಿದೆ. ಆತನಿಗೆ ಕೊಡಲಿಯಂತಹ ವಸ್ತು ಮತ್ತು ರಾಡ್‍ಗಳಿಂದ ಥಳಿಸಲಾಯಿತು. ಅವರು ಆತನನ್ನು ಅಪಹರಿಸಿ ಅಮಲು ಪದಾರ್ಥಗಳನ್ನು ನೀಡಿದರು. ವಿಡಿಯೋದಲ್ಲಿ ನೀನೊಬ್ಬ ಮುಸ್ಲಿಮ್ ಎಂದು ಹೇಳುತ್ತಿರುವುದನ್ನು ಕಾಣಬಹುದು. ಧರ್ಮದ ಕಾರಣಕ್ಕೆ ಆತನನ್ನು ಗುರಿಯಾಗಿಸಿದ್ದರೆ ಪೊಲೀಸರು ತನಿಖೆ ನಡೆಸಬೇಕು. ನಮಗೆ ನ್ಯಾಯ ಬೇಕು ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು